ಕೆಂಪು - ನಿಲ್ಲಲು | |
ನಿಮ್ಮ ವಾಹನವನ್ನು ನಿಲುಗಡೆ ಪಟ್ಟಿ ಅಥವಾ ಪಾದಚಾರಿಪಟ್ಟಿಗಿಂತ ಹಿಂದೆ ನಿಲ್ಲಿಸತಕ್ಕದ್ದು. |
ಹಳದಿ - ಎಚ್ಚರಿಕೆಯಿಂದಿರಿ | |
ನೀವು ವಾಹನ ನಡೆಸುವಾಗ ಹಳದಿ ದೀಪವನ್ನು ನೋಡಿದ ತಕ್ಷಣ ನಿಮ್ಮ ವಾಹನವನ್ನು ಎಚ್ಚರಿಕೆಯಿಂದ ನಿಲುಗಡೆ ಪಟ್ಟಿ ಅಥವಾ ಪಾದಚಾರಿಪಟ್ಟಿಗಿಂತ ಹಿಂದೆ ನಿಲ್ಲಿಸತಕ್ಕದ್ದು. |
ಹಸಿರು - ಹೋಗಲು | |
ತಿರುವುಗಳಲ್ಲಿ ಬಹಳ ಎಚ್ಚರಿಕೆಯಿಂದ ವಾಹನವನ್ನು ಓಡಿಸಿರಿ. ಬಾಣ ತೋರಿಸುವ ದಿಕ್ಕಿಗೆ ಸೂಚಿಸಲಾದಂತೆ ನೀವು ತಿರುವನ್ನು ತೆಗೆದುಕೊಳ್ಳಬಹುದು. |
ಪಾದಚಾರಿ ಸಿಗ್ನಲ್ಸ್ | |
ಇಂತಹ ಸೂಚನೆಗಳು ಪಾದಚಾರಿಗಳು ರಸ್ತೆಯನ್ನು ಸುರಕ್ಷಿತವಾಗಿ ದಾಟಲು ಸಹಾಯ ಮಾಡುತ್ತವೆ. ಸೂಚನಾ ದೀಪದಲ್ಲಿ ಕೆಂಪು ಮಾನವ ಚಿತ್ರ ಮೂಡಿದಾಗ ರಸ್ತೆಯನ್ನು ದಾಟಬೇಡಿ. ಹಸಿರು ಮಾನವ ಚಿತ್ರ ಮೂಡಿದಾಗ ಮಾತ್ರ ಎಚ್ಚರಿಕೆಯಿಂದ ರಸ್ತೆ ದಾಟುವುದು ಸುರಕ್ಷಿತ. |