English

ಬೆಂಗಳೂರು ನಗರ ಸಂಚಾರ ಪೊಲೀಸ್

ಜಂಟಿ ಪೊಲೀಸ್ ಆಯುಕ್ತರು, ಸಂಚಾರ ರವರ ಸಂದೇಶ

ಪ್ರಿಯ ಬೆಂಗಳೂರಿಗರೇ,

ಬೆಂಗಳೂರು ನಗರದಲ್ಲಿ ಸುಗಮ ಹಾಗು ಸುವ್ಯವಸ್ಥಿತ ಸಂಚಾರ ವ್ಯವಸ್ಥೆಗಾಗಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬೆಂಗಳೂರುನಗರ ಸಂಚಾರ ಪೊಲೀಸರು ಸಜ್ಜಾಗಿದ್ದಾರೆ.

ಮೂಲಭೂತ ಸೌಕರ್ಯಗಳ ಕೊರತೆ, ವಾಹನ ಸಂಖ್ಯೆಯ ಮಿತಿಮೀರಿದ ಹೆಚ್ಚಳ, ನಗರದಲ್ಲಿ ಜನರ ಸತತ ಒತ್ತಡ, ಪೊಲೀಸ್ ಸಿಬ್ಬಂದಿಯ ಕೊರತೆ ಸಾಮಾನ್ಯ ಜನರ ಬವಣೆಗೆ, ಅಂತೆಯೇ ಸಂಚಾರ ಪೊಲೀಸರ ಬವಣೆಗೂ ಕಾರಣವಾಗಿದೆ. ಇದರಿಂದ ಹೊರಬರಲು, ನೂತನ ತಂತ್ರಙ್ಞನಗಳನ್ನು ಉಪಯೋಗಿಸಿಕೊಂಡು, ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು, ಸಮರ್ಪಕವಾಗಿ ಸಂಚಾರ ಸಾಗಲು ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸದ್ಯಕ್ಕೆ ತಾತ್ಕಾಲಿಕವಾಗಿ ಸಂಚಾರ ನಿರ್ವಹಣಾ ಕೇಂದ್ರ (TMC) ಸ್ಥಾಪಿಸಲಾಗಿದೆ. ೧೬೦ ವೃತ್ತಗಳಲ್ಲಿ, ರಸ್ತೆಗಳಲ್ಲಿ ಕಣ್ಗಾವಲು (ಸರ್ವೆಲೆನ್ಸ್) ಕ್ಯಾಮೆರಾಗಳನ್ನು ಅಳವಡಿಸಿದ್ದು, ೧೦ ಜಾರಿ(ಎನ್‌ಫೋರ್ಸ್‌ಮೆಂಟ್) ಕ್ಯಾಮೆರಾಗಳಿದ್ದು ಸಂಚಾರ ಉಲ್ಲಂಘನೆಗಳ ದೃಶ್ಯಾವಳಿಗಳನ್ನು ನಿರಂತರವಾಗಿ ಗಮನಿಸಲಾಗುವುದು ಮತ್ತು ವಾಹನದ ಸಂಚಾರ ನಿಯಮ ಉಲ್ಲಂಘನೆಗಳ ಆಧಾರದ ಮೇಲೆ ಸ್ವಯಂಚಾಲಿತವಾಗಿ ಮುಖ್ಯ ಗಣಕಯಂತ್ರದಲ್ಲಿ ನೊಂದಾಯಿಸಲ್ಪಡುತ್ತವೆ. ೩೦೧ ಸಂಚಾರ ದೀಪಗಳನ್ನು ( ಸಿಗ್ನಲ್ ಲೈಟ್ಸ್ ) ಸಂಚಾರ ನಿರ್ವಹಣಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಿದ್ದು ನೇರವಾಗಿ ಸಂಚಾರ ನಿರ್ವಹಣಾ ಕೇಂದ್ರದಿಂದ ಯಾವುದೇ ರೀತಿಯ ಸಂಚಾರ ದೀಪಗಳ ಸಮಯ ಬದಲಾವಣೆಯನ್ನು ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸಂಚಾರ ದೀಪಗಳು ವಾಹನಗಳ ಚಲನೆ ಮೂಲಕ, ವಾಹನಗಳ ಸಾಂದ್ರತೆ ಅರಿತು ಸ್ವಯಂ ಚಾಲಿತವಾಗಲಿವೆ. ಸುಮಾರು ೧೩ ಕೋಟಿ ರೂಪಾಯಿ ವೆಚ್ಚದಲ್ಲಿ ಶಾಶ್ವತವಾದ ಸಂಚಾರ ನಿರ್ವಹಣಾ ಕೇಂದ್ರವು ಇನ್ನು ೧೮ ತಿಂಗಳುಗಳಲ್ಲಿ ಸಿದ್ದವಾಗಲಿದೆ. ಇದು ಚುರುಕು ಸಾರಿಗೆ ವ್ಯವಸ್ಥೆ (ಇಂಟಿಲಿಜೆನ್ಸ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ITS) ಕಲ್ಪಿಸುವುದರಲ್ಲಿ ಅತಿ ಪ್ರಮುಖ ಹೆಚ್ಜೆಯಾಗಿದೆ. ಸಂಚಾರ ನಿರ್ವಹಣಾ ಕೇಂದ್ರದಿಂದ ೧೬೦ ಕಣ್ಗಾವಲು ಕ್ಯಾಮೆರಾ, ೧೦ ಜಾರಿ ಕ್ಯಾಮೆರಾ, ೫೦ ಸುಧ್ಧಿ ದರ್ಶಕಗಳು (ವಿ.ಎಮ್.ಎಸ್), ೪೦೦ ಸಂಚಾರ ದೀಪಗಳನ್ನು ನೇರವಾಗಿ ನಿರ್ವಹಣೆ ಮಾಡಬಹುದು. ಕೆಲವೊಂದು ಆಯ್ದ ರಸ್ತೆಗಳಲ್ಲಿ ಏರಿಯಾ ಟ್ರಾಫಿಕ್ ಕಂಟ್ರೋಲ್ (ATC) ಸ್ಥಾಪಿಸಲಾಗುವುದು. ಪಾದಚಾರಿಗಳಿಗೆ ಸಹಾಯವಾಗುವಂತೆ ೨೦ ಪಾದಚಾರಿ ದೀಪ (ಪೆಲಿಕನ್ ಲೈಟ್ಸ್) ಹಾಗೂ ೫೦೦ ಮಿಂಚುದೀಪಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಸಹಾಯವಾಣಿ ಹಾಗೂ ನಿಲುಗಡೆ ಸ್ಥಳ ಕುರಿತು ಮಾಹಿತಿಯನ್ನು ನೀಡಬಹುದಾಗಿದೆ.

ಸಂಚಾರ ಉಲ್ಲಂಘನೆ ಮಾಡುವವರನ್ನು ಶಿಕ್ಷಿಸಲು ಈಗಾಗಲೇ ೯ ಇಂಟರ್‌ಸೆಪ್ಟರ್‌ಗಳಿದ್ದು ದೃಶ್ಯಾವಳಿಗಳ ಮೂಲಕ ಚಿತ್ರಿಸುವುದರಿಂದ, ತಪಿತಸ್ಥರು ತಪ್ಪಿಸಿಕೊಳ್ಳಲಾರದಂತೆ ಮಾಡಲಾಗಿದೆ. ೪೪ ಸಂಚಾರ ಠಾಣೆಗಳಲ್ಲಿ ಗಣಕಯಂತ್ರಗಳ ಮೂಲಕ ಉಲ್ಲಂಘನೆಗಳನ್ನು ನಮೂದಿಸಿ, ಸಾರ್ವಜನಿಕರಿಗೆ ಅಂಚೆ ಮೂಲಕ ನೋಟೀಸುಗಳನ್ನು ರವಾನಿಸುವ ವ್ಯವಸ್ಥೆ ಮಾಡಿದೆ. ಈ ನೋಟೀಸ್‌ಗಳಿಗೆ ದಂಡವನ್ನು ಬೆಂಗಳೂರ್ ಒನ್ ಕೇಂದ್ರ ಹಾಗೂ ಅಂತರ್ಜಾಲದ ಮೂಲಕ ಸಹ ಕಟ್ಟಬಹುದು ಅದೇ ರೀತಿ ಪಿ ಡಿ ಎ(ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್) ಮೂಲಕ ಹಿಂದಿನ ಉಲ್ಲಂಘನೆಗಳ ಮಾಹಿತಿ, ಪದೇ ಪದೇ ಉಲ್ಲಂಘಿಸುವವರ ವಿವರ ಹಾಗೂ ರೂಢಿಗತ ಅಪರಾಧಿಗಳ ವಿವರವನ್ನು ಪಡೆಯ ಬಹುದಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕೂಡಾ ನಮ್ಮ ಕಾರ್ಯ ಸಮರ್ಪಕವಾಗಿ ಸಾಗಿದೆ.

ಹೊಸದಾದ ಅಂತರ್ಜಾಲದ ಮೂಲಕ, ಅಂತರ್ಜಾಲದ ಆಸಕ್ತಿವುಳ್ಳ ಜನರಿಗೆ ಸಾಕಷ್ಟು ವಿಷಯಗಳನ್ನು ಪ್ರಸ್ತಾಪಿಸಿದ್ದು, ನಮ್ಮೊಂದಿಗೆ ಕೈ ಜೋಡಿಸಿ, ಸಂಚಾರ ಸಮಸ್ಯೆಗಳನ್ನು ನಿಭಾಯಿಸಲು ಹಾಗು ಸುಗಮ ಸಂಚಾರವನ್ನು ಸಾಕಾರಗೊಳಿಸಲು ಸಹಕರಿಸಿ.

ಶುಭಾಶಯಗಳೊಂದಿಗೆ, ಅಂತರ್ಜಾಲವನ್ನು ಆನಂದಿಸಿ,


ಎಂ ಎನ್ ಅನುಚೇತ್, ಐ.ಪಿ .ಎಸ್,
ಜಂಟಿ ಪೊಲೀಸ್ ಆಯುಕ್ತರು,
ಸಂಚಾರ,
ಬೆಂಗಳೂರು ನಗರ,