English

ಬೆಂಗಳೂರು ನಗರ ಸಂಚಾರ ಪೊಲೀಸ್

ಆರಕ್ಷಕ ಆಯುಕ್ತರ ಸಂದೇಶ

ಪ್ರಿಯ ಬೆಂಗಳೂರಿಗರೇ,

ಉತ್ತಮವಾದ ಗುಣಮಟ್ಟದ ಶಿಕ್ಷಣ, ಅಹ್ಲಾದಕರವಾದ ವಾತಾವರಣ, ಅಧಿಕ ತಾಂತ್ರಿಕ ಹಾಗೂ ಜೈವಿಕ ಸಂಸ್ಥೆಗಳು, ಅಧಿಕ ಉದ್ಯೋಗ ಅವಕಾಶಗಳು, ಜಾಗತೀಕರಣದ ಕಾರಣಗಳಿಂದ ಸಾರಿಗೆ ಹಾಗೂ ಸಂಚಾರದ ಮೇಲೆ ಅಧಿಕ ಒತ್ತಡ ಬೀರಿದೆ. ಮೂಲ ಸೌಕರ್ಯಗಳ ಕೊರತೆ, ಸಾರ್ವಜನಿಕ ಸಾರಿಗೆ ಸಂಚಾರವನ್ನು ಅಸ್ತವ್ಯಸ್ತಗೊಳಿಸಿದೆ. ೧೫ ಲಕ್ಷ ವಾಹನಗಳು ಚಲಿಸುವ ರಸ್ತೆಗಳಲ್ಲಿ ಇದೀಗ ಸುಮಾರು ೭೨ ಲಕ್ಷಕ್ಕಿಂತಲೂ ಹೆಚ್ಚಿನ ವಾಹನಗಳು ಚಲಿಸುತ್ತಿವೆ
ಈ ಎಲ್ಲಾ ಕಾರಣಗಳಿಂದ ಸಂಚಾರ ನಿರ್ವಹಣೆ, ಜಾರಿ ಮಾಡುವ ಕ್ರಮ ಬದಲಾಗಬೇಕಿದೆ. ಈ ಸಮಸ್ಯ ಬಗೆಹರಿಸಲು ಬೆಂಗಳೂರು ನಗರ ಸಂಚಾರ ಪೊಲೀಸರು ಬಿ-ಟ್ರಾಕ್ ೨೦೧೦ ಯೋಜನೆಯಡಿಯಲ್ಲಿ ಸಧ್ಯಕ್ಕೆ ಇರುವಂತಹ ಸಂಪನ್ಮೂಲಗಳನ್ನು ಬಳಸಿಕೊಂಡು ಸಮರ್ಪಕವಾಗಿ ಸಂಚಾರ ನಿರ್ವಹಣೆ ಮಾಡಲು ಅನುಕೂಲವಾಗಿದೆ. ಖಾಸಗಿ ವಾಹನಗಳಿಗಿಂತ ಸಾರ್ವಜನಿಕ ವಾಹನ ಉಪಯೋಗಿಸುವುದು, ಮಾನವ ನಿಯಂತ್ರಿತವನ್ನು ಯಾಂತ್ರಿಕ ಹಾಗೂ ಹೊಸ ತಂತ್ರಙ್ಞನದ ಮೂಲಕ ನಿರ್ವಹಿಸುವುದು, ಅದೇ ರೀತಿಯಲ್ಲಿ ಜಂಕ್ಷನ್ ಗಳ ಸುಧಾರಣೆ, ಕಣ್ಗಾವಲು ಹಾಗೂ ಜಾರಿ ಕ್ಯಾಮೆರಾಗಳನ್ನು ಅಳವಡಿಸುವುದು, ಇಂಟಿಲಿಜೆನ್ಸ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ (ITS) ರಸ್ತೆಗಳಿಗೆ ಬೇಕಾದ ಸೌಕರ್ಯಗಳನ್ನು ಕಲ್ಪಿಸುವುದು, ಸರ್ವರಿಗೂ ಸಂಚಾರದ ಬಗ್ಗೆ ಶಿಕ್ಷಣದ ಮೂಲಕ ಅರಿವು ಮೂಡಿಸುವುದು ಹಾಗೂ ಮಾನವ ಸಂಪನ್ಮೂಲಗಳನ್ನು ಸಂಚಾರ ನಿಯಂತ್ರಣಕ್ಕೆ ಬಳಸಿಕೊಳ್ಳುವುದು..

ಹೊಸದಾದ ತಂತ್ರಙ್ಞನವನ್ನು ಅಳವಡಿಸಿ ಹೊಸ ಹೊಸ ಯೋಜನೆಗಳನ್ನು ಮಾಡಿ, ಸ್ಥಳೀಯ ಜನರ, ಸಂಸ್ಥೆಗಳ ಅಭಿಪ್ರಾಯ ಸಲಹೆಗಳನ್ನು ಪಡೆದು ಸಂಚಾರ ಸುಗಮವಾಗುವ ಸರ್ವ ಸಲಹೆಗಳನ್ನು ಸ್ವೀಕರಿಸಲಾಗುವುದು.

ಸಂಚಾರ ಪೊಲೀಸರು ಸಂಚಾರ ನಿರ್ವಹಣೆಯನ್ನು ಅತ್ಯಂತ ಸೂಕ್ಷ್ಮವಾಗಿ ಅರಿಯಬೇಕಾಗಿದೆ. ಒಂದು ಕಡೆಯಿಂದ ಸಿಬ್ಬಂದಿಯ ಕೊರತೆಯನ್ನು ನಿಭಾಯಿಸಿ, ಹೊಸ ಹೊಸ ಉಪಕರಣಗಳನ್ನು ಖರೀದಿಸಿ, ಇನ್ನೊಂದು ಕಡಿಯಿಂದ ಸಧ್ಯಕ್ಕೆ ಇರುವ ಸಿಬ್ಬಂದಿಯ ಕಾರ್ಯ ಕೌಶಲ್ಯತೆಯನ್ನು ಹೆಚ್ಚಿಸಿ, ಅವರಿಗೆ ನವ ಚೈತನ್ಯ ತುಂಬಿ ನಡೆ-ನುಡಿಯಲ್ಲಿ ಕೂಡ ಬದಲಾಗುವಂತೆ ತರಬೇತಿ ನೀಡಲಾಗುವುದು.

ಸಂಚಾರ ಪೊಲೀಸರು ಅತಿ ಉತ್ಸುಕತೆಯಿಂದ ಸಮಸ್ಯೆಗಳನ್ನು ಸ್ವೀಕರಿಸಿ ಸುಗಮವಾದ ಸಂಚಾರ ನಿರ್ವಹಿಸಲು ಸದಾ ಕಾರ್ಯ ಪ್ರವೃತ್ತರಾಗಿರುತ್ತಾರೆ ಅಂತಾ ಭರವಸೆ ನೀಡುತ್ತೇನೆ.


ಶುಭಾಶಯಗಳೊಂದಿಗೆ.
ಶ್ರೀ ಬಿ. ದಯಾನಂದ , ಐಪಿಎಸ್.
ಪೊಲೀಸ್ ಆಯುಕ್ತರು, ಬೆಂಗಳೂರು ನಗರ.