English

ಬೆಂಗಳೂರು ಸಂಚಾರ ಪೊಲೀಸ್

ಬೆಂಗಳೂರು ಸಂಚಾರ

ಬೆಂಗಳೂರು ನಗರ ಮತ್ತು ಸಂಚಾರ

ಇಡೀ ದೇಶದಲ್ಲೇ ಬೆಂಗಳೂರು ನಗರವು ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಐಟಿ ಇಂಡಸ್ಟ್ರೀಸ್‌ಯಲ್ಲಿನ ತೀವ್ರ ಬೆಳವಣಿಗೆಯಿಂದ ಈ ನಗರದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚುತ್ತಿವೆ. ಇದರಿಂದಾಗಿ ಈ ನಗರz ಜನಸಂಖ್ಯೆಯಲ್ಲಿ ಒಂದೇ ಸಮನೇ ಹೆಚ್ಚಳವಾಗುತ್ತಿದೆ. ಇದಕ್ಕೆ ಅನುಗುಣವಾಗಿ ಜನರ ವ್ಯವಹಾರದ ಚಟುವಟಿಕೆಗಳಲ್ಲಿ ವೃಧ್ದಿಯಾಗುತ್ತಿದ್ದು, ಇದರ ಪರಿಣಾಮ ವಾಹನಗಳು ಅಧಿಕಗೊಳ್ಳುತ್ತಿದ್ದು, ಭೂಮಿಯ ಬಗ್ಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತಿದೆ. ಬೆಂಗಳೂರು ನಗರದ ಸಂಚಾರ ಒತ್ತಡವನ್ನು ಕಡಿಮೇ ಮಾಡಲು ಬಹಳಷ್ಟು ಒತ್ತು ನೀಡಲಾಗಿದೆ. ವಿಶೇಷವಾಗಿ ರಸ್ತೆಗಳನ್ನು ವಿಸ್ತುರಿಸುವುದಕ್ಕಿಂತ ಇರುವ ರಸ್ತೆಗಳನ್ನೇ ಉಪಯೋಗಿಸಿ ಒತ್ತಡ ಕಡಿಮೇ ಮಾಡಬೇಕೆಂದು ಅಭಿಪ್ರಾಯ ಕೇಳಿ ಬರುತ್ತಿದೆ. ಅದಾಗ್ಯೂ ಉತ್ತಮ ಪಾರ್ಕಿಂಗ್ ಸೌಲಭ್ಯವನ್ನು ಒದಗಿಸಲು ಸರ್ಕಾರ ಕಾಯಿದೆಯನ್ನು ಜಾರಿಗೊಳಿಸಬೇಕು. ಸರ್ಕಾರ ಮತ್ತು ಬಿಬಿ‌ಎಂಪಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ., ಪರಿಸ್ಥಿತಿಯನ್ನು ಗಂಭೀರತೆಯನ್ನು ಅರಿತು ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾನೂನನ್ನು ಜಾರಿಗೊಳಿಸುವ ಅಗತ್ಯವಿದೆ.

ಬೆಂಗಳೂರು ನಗರದಲ್ಲಿ ಒಂದೇ ಸಮನೇ ತಲೆ ಎತ್ತುತ್ತಿರುವ ಐಟಿ ಕಂಪನಿಗಳು ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಖಾನೆಗಳ ತೀವ್ರ ಬೆಳವಣಿಗೆಯಿಂದ ವಾಹನಗಳ ಸಂಖ್ಯೆ ೧.೫ ಮಿಲಿಯನ್‌ಗೂ ಅಧಿಕಗೊಂಡಿದ್ದು, ವಾರ್ಷಿಕ ೭-೧೦% ರಷ್ಟು ಅಧಿಕಗೊಳ್ಳುತ್ತಿದೆ. ನಗರವು ಜನಸಂಖ್ಯೆ ಹಾಗೂ ವಿಸ್ತೀರ್ಣದಲ್ಲಿ ಬೆಳದಂತೆಲ್ಲಾ, ಸಮಸ್ಯೆಗಳ ಸರಮಾಲಯೇ ಉದ್ಭವವಾಗುತ್ತದೆ. ಕಾರ್ ಮತ್ತು ದ್ವಿಚಕ್ರ ವಾಹನಗಳನ್ನು ಸ್ವಂತ ಓಡಾಟಕ್ಕೆ ಬಳಸುತ್ತಿರುವುದು ಸಾಮಾನ್ಯವಾಗಿದ್ದು, ಇದರಿಂz ಸುಮಾರು ಶೇಕಡ ೯೦% ರಷ್ಟು ನೊಂದಾಯಿಸಿದ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಒಟ್ಟು ವಾಹನಗಳ ಸಾಂದ್ರತೆಯಲ್ಲಿ ದ್ವಿಚಕ್ರವಾಹನಗಳ ಸಂಖ್ಯೆಯೇ ಶೇಕಡ ೭೦% ರಷ್ಟಿದ್ದು, ಕಾರ್ ಶೇಕಡ ೧೫% ರಷ್ಟು, ಅಟೋರಿಕ್ಷಾಗಳ ಸಂಖ್ಯೆ ೪%ರಷ್ಟು ಹಾಗೂ ಉಳಿದ ವಾಹನಗಳಾದ ಬಸ್, ವಾನ್ ಮತ್ತು ಟೆಂಪೋಗಳ ಸಂಖ್ಯೆ ಶೇಕಡ ೮% ರಷ್ಟಿರುತ್ತದೆ.



ಸಂಚಾರ ಬೆಳವಣಿಗೆಯ ಪರಿಣಾಮಗಳು
Sl.No Year No.of Cases Registered Total Fine Amount (Rs.in crores)
6 2012 5204800 53.85
7 2013 5433516 56.98
8 2014 7436336 65.92
9 2015 7626671 70.44
10 2016 9180438 66.97
11 2017 10193274 112.38
12 2018 8389559 81.25
13 2019 7987919 89.18
14 2020 8406182 99.57
15 2021 9358135 140.32
16 2022 ಜನವರಿ 565949 12.59

• ಕಛೇರಿ ವೇಳೆಯಲ್ಲಿ ಸಂಚಾರ ವೇಗದ ಮಿತಿಯು ಗಂಟೆಗೆ ೧೫ ಕಿ.ಮೀ ವೇಗಕ್ಕೆ ಕುಸಿದಿದೆ.
• ವಾಹನಗಳನ್ನು ನಿಲ್ಲಿಸಲು ಸ್ಥಳವಿಲ್ಲದೇ ಇರುವುದು ಅಥವಾ ನಿಲ್ಲಿಸಲು ಸಾಕಾಗುವಷ್ಟು ಜಾಗದ ಕೊರತೆ
• ಸಾರ್ವಜನಿಕ ಸಾರಿಗೆ ವಾಹನಗಳಿಗೆ ಮೀಸಲಾದ ರಸ್ತೆಯನ್ನು ಖಾಸಗಿ ಉಪಯೋಗಕ್ಕೆ ಬಳಸಿಕೊಳ್ಳುವುದು

Year Bus fleet size (Nos)
1997 1921
2017 6450
2021 13202
ಬೆಂಗಳೂರು ನಗರದಲ್ಲಿನ ವಾಹನ ಸಾಂದ್ರತೆ (ಜುಲೈ 2019 ರಂತೆ)
Two Wheelers LMV A/R H.T.V H.G.v Others Total
5730388 1849035 207951 124333 153204 188307 8253218
ಬೆಂಗಳೂರು ನಗರದಲ್ಲಿನ ವಾಹನ ಸಾಂದ್ರತೆ (ಜುಲೈ 2019 ರಂತೆ )