English

ಬೆಂಗಳೂರು ನಗರ ಸಂಚಾರ ಪೊಲೀಸ್

ಪದೇ ಪದೇ ಕೇಳಲಾದ ಪ್ರಶ್ನೆಗಳು

ಚಾಲಕನು ತನ್ನ ವಾಹನವನ್ನು ಚಾಲನೆ ಮಾಡುವಾಗ ಅವನ ಬಳಿ ಯಾವ ದಾಖಲಾತಿಗಳನು ಇಟ್ಟುಕೊಳ್ಳಬೇಕು ?

  • ಚಾಲನ ಪರವಾನಿಗೆ/ನೋಂದಾಯಿತ ಪತ್ರಗಳು
  • ತೆರಿಗೆ ಪ್ರಯಾಣಪತ್ರ
  • ವಾಯುಮಾಲಿನ್ಯ ಪರೀಕ್ಷಣಾ ಪತ್ರ
  • ವಿಮಾ ದಾಖಲಾತಿ ಪತ್ರ
  • ಸದೃಡತೆ ಸರ್ಟಿಫಿಕೇಟ್ & ಅನುಮತಿ ಪತ್ರ (ಅದು ಸಾರಿಗೆ ವಾಹನವಾಗಿದ್ದಲ್ಲಿ)

ಸ್ಥಳದಲ್ಲಿ ಸಂಚಾರದಂಡವನ್ನು ಸಂಗ್ರಹಿಸುವ ಅಧಿಕಾರವನ್ನು ಯಾರಿಗೆ ನೀಡಲಾಗಿದೆ?
ಪೊಲೀಸ್ ಇಲಾಖೆಯ ಸಂಚಾರ ವಿಭಾಗದ ಸಹಾಯ ಸಬ್ ಇನ್ಸ್‌ಪೆಕ್ಟರ್ ಮಟ್ಟದ ಹಾಗೂ ಅದಕ್ಕಿಂತ ಹೆಚ್ಚಿನ ಅಧಿಕಾರವುಳ್ಳ ಅಧಿಕಾರಿಗಳಿಗೆ ಹಣ ಪಡೆದು ರಸೀತಿ ನೀಡುವ ಅಧಿಕಾರವನ್ನು ನೀಡಲಾಗಿದೆ.

ನನ್ನಲ್ಲಿ ದಂಡ ತೆರಲು ಹಣವಿಲ್ಲದಿದ್ದರೆ, ಎನು ಮಾಡಬೇಕು?
ಸೆಕ್ಟನ್ ೨೦೬(೨) ಎಂ.ವಿ ಅಕ್ಟ್ , ೧೯೮೮ ರ ಪ್ರಕಾರ , ನೀವು ದಂಡದ ಹಣವನ್ನು ಸ್ಥಳದಲ್ಲಿ ತೆರಲು ಸಾಧ್ಯವಿರದ ಸ್ಥಿತಿಯಲ್ಲಿ ಪೊಲೀಸ್ ಅಧಿಕಾರಿಯು ನಿಮ್ಮಲ್ಲಿರುವ ಅಸಲಿ ಚಾಲನಾ ಪತ್ರವನ್ನು ಅತನ ವಶಕ್ಕೆ ತೆಗೆದುಕೊಂಡು, ಒಂದು ವಾರದೊಳಗಾಗಿ ಸೂಚಿಸಿದ ನ್ಯಾಯಾಲದ ಮುಂದೆ ಹಾಜರಾಗುವಂತೆ ತಿಳಿಸಿ ಸೂಚನಾ ಪತ್ರವನ್ನು ನೀಡುತ್ತಾರೆ. .

ಟ್ರಾಫಿಕ್ ಎನ್‌ಫೋರ್ಸ್‌ಮೆಂಟ್ ಕೇಂದ್ರದಿಂದ ನಾನು ಸೂಚನಾ ಪತ್ರ ಪಡೆದಿದ್ದೇನೆ? ಇದನ್ನು ಯಾವ ರೀತಿ ಪರಿಹರಿಸಿಕೊಳ್ಳಬೇಕು ?
ನೀವು ಎನ್‌ಪೋರ್ಸ್‌ಮೆಂಟ್ ಅಟೋಮೇಷನ್ ಸೆಂಟರ್, ನಂ. ೫, ಸಂಚಾರ ಕೇಂದ್ರ ಸ್ಥಾನ, ೫ ನೇ ಮಹಡಿ, ಇನ್ ಫ಼್ಯಾನ್ ಟ್ರಿ ರಸ್ತೆ, ಬೆಂಗಳೂರು ಅಥವಾ ಬೆಂಗಳೂರು ನಗರದಲ್ಲಿರುವ ಯಾವುದೇ ೪೨ ಸಂಚಾರ ಪೊಲೀಸ್ ಠಾಣೆಗಳಲ್ಲಿ ದಂಡವನ್ನು ಪಾವತಿಸಬಹುದು. ಅಲ್ಲದೆ ಬೆಂಗಳೂರು-ಒನ್ ಕೇಂದ್ರಗಳಲ್ಲಿಯೂ ಸಹ ಸೂಚನಾ ಪತ್ರದಲ್ಲಿರುವ ದಂಡದ ಹಣವನ್ನು ಪಾವತಿಸಿ ರಸೀತಿ ಪಡೆಯಬಹುದು.

ಆಸನ ಪಟ್ಟಿಯ ಬಗ್ಗೆ ನಿಯಮಗಳೇನು?
ಸೆಕ್ಷನ್ ೧೩೮ ಸಿ‌ಎಂವಿ‌ಆರ್ ರಿ/ವಿ ೧೭೭ ಎಂವಿ‌ಅಕ್ಟ್ ರ ಪ್ರಕಾರ ವಾಹನವನ್ನು ಚಲಿಸುವಾಗ ಚಾಲಕ ಮತ್ತು ಅತನ ಪಕ್ಕದಲ್ಲಿ ಮುಂಭಾಗ ಅಸನದಲ್ಲಿ ಕುಳಿತಿರುವ ವ್ಯಕ್ತಿಗಳು ಆಸನ ಪಟ್ಟಿಯನ್ನು ತೊಟ್ಟುಕೊಳ್ಳಬೇಕು.


ಚಾಲಕ ವಾಹನ ಓಡಿಸುವಾಗ ಮೊಬೈಲ್‌ಪೋನ್‌ನಲ್ಲಿ ಮಾತನಾಡಬಹುದೇ?
ಸೆಕ್ಷನ್ ೨೫೦(ಎ) ಎಂಎಂವಿ‌ಆರ್, ರಿ/ವಿ ೧೭೭ ಎಂ.ವಿ.ಅಕ್ಟ್, ರ ಪ್ರಕಾರ ಚಾಲಕನು ವಾಹನವನು ಚಾಲನೆ ಮಾಡುವಾಗ ಅಥವಾ ಮೋಟಾರ್‌ಸೈಕಲ್‌ನ್ನು ಓಡಿಸುವಾಗ ಮೊಬೈಲ್ ಪೋನ್‌ನ್ನು ಬಳಸುವಂತಿಲ್ಲ

ಚಾಲಕನ ಹೊರೆತು ವಾಹನದಲ್ಲಿ ಪ್ರಯಾಣಿಸುವ ಇತರರು ಮೊಬೈಲ್‌ನ್ನು ಬಳಸಬಹುದೇ ?
ಹೌದು, ಚಾಲಕನ ಹೊರೆತು ವಾಹನದಲ್ಲಿ ಪ್ರಯಾಣಿಸುವ ಇತರರು ಮೊಬೈಲ್‌ನ್ನು ಬಳಸಬಹುದು.

ನಾನೊಬ್ಬ ವೈಧ್ಯನಾಗಿ, ವಾಹನ ಚಲಾಯಿಸುತ್ತಿರುವಾಗ ತುರ್ತು ಕರೆ ಬಂದರೆ ಅ ಕರೆಯನ್ನು ಸ್ವೀಕರಿಸಬಹುದೇ ?
ಇಲ್ಲಾ, ಮೋಟಾರ್ ವಾಹನ ಕಾಯಿದೆಯಡಿಯಲ್ಲಿ ಯಾರೊಬ್ಬರಿಗೂ ಕೂಡ ಈ ನಿಯಮಗಳಿಂದ ವಿನಾಯಿತಿ ನೀಡಿಲ್ಲ. ಅಂತಹ ಪರಿಸ್ಥಿತಿಯಲ್ಲಿ ತಾವು ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ನಂತರ ಕರೆಯನ್ನು ಸ್ವೀಕರಿಸಬಹುದು.

ತಾನು ಚಾಲನೆ ಮಾಡುತ್ತಿರುವ ವಾಹನವು, ಸಾವು/ತೀವ್ರ ಸ್ವರೂಪದ ಗಾಯ/ಅಸ್ತಿಗೆ ದಕ್ಕೆ ಮುಂತಾದ ಘಟನೆಗಳಿಗೆ ತುತ್ತಾದಾಗ ಅದನ್ನು ಚಾಲನೆ ಮಾಡುತ್ತಿದ್ದ ಚಾಲಕನ ಕರ್ತವ್ಯಗಳೇನು ?
ಕರ್ತವ್ಯಗಳು ಈ ರೀತಿ ಇರುತ್ತವೆ. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಬೇಕು, ಒಂದು ವೇಳೆ ವಾಹನವು ಪೆಟ್ರೋಲ್ ಅಥವಾ ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದರೆ, ಯಾರೂ ಅ ವಾಹನದ ಬಳಿ ಸುಳಿಯದಂತೆ ನೋಡಿಕೊಳ್ಳಬೇಕು. ಸ್ಥಳದ ಬಳಿ ಸಿಗರೇಟ್ ಸೇದದಂತೆ ಎಚ್ಚರಿಕೆ ವಹಿಸಬೇಕು ಮತ್ತು ವಾಹನದಲ್ಲಿ ಪ್ರಚಾರ ಪಡಿಸಿರುವ ಸುರಕ್ಷತಾ ನಿಯಮಗಳನ್ನು ತುರ್ತಾಗಿ ಪಾಲಿಸಬೇಕು.

ಎಂತಹ ಸಂದರ್ಬಗಳಲ್ಲಿ ಟೋಯಿಂಗ್ ವಾಹನವನ್ನು ಬಳಸಲಾಗುತ್ತದೆ ?
ಯಾವುದೇ ವ್ಯಕ್ತಿ ಸರಿಯಾದ ಕ್ರಮದಲ್ಲಿ ತನ್ನ ವಾಹನವನ್ನು ನಿಲ್ಲಿಸದೇ ಬಿಟ್ಟು ಹೋಗಿರುವ ಸಂದರ್ಬ, ವಾಹನದ ಬಗ್ಗೆ ಎಚ್ಚರಿಕೆ ವಹಿಸಲು ಯಾವುದೇ ವ್ಯಕ್ತಿ ಸ್ಥಳದಲ್ಲಿ ಇಲ್ಲದೇ ಇರುವುದು, ನಿಷೇಧಿಸಲ್ಪಟ್ಟ ಸ್ಥಳಗಳಲ್ಲಿ ವಾಹನವನ್ನು ನಿಲ್ಲಿಸಿರುವುದು ಇಲ್ಲವೇ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುವಂತಿದ್ದಂತಹ ಸಂದರ್ಬಗಳಲ್ಲಿ ಅ ವಾಹನವನ್ನು ಟೋಯಿಂಗ್ ವಾಹನ ಬಳೆಸಿ ಬೇರೆಡೆ ಸ್ಥಳಾಂತರಿಸಲಾಗುವುದು.

ಕುಡಿದು ವಾಹನ ಓಡಿಸಿದರೆ ಇಲ್ಲವೇ ಮಾದಕ ವಸ್ತುಗಳನ್ನು ಸೇವಿಸಿ ಅದರ ಪ್ರಭಾವದಿಂದ ವಾಹನ ಓಡಿಸಿದರೆ ಕಾನೂನಿನಲ್ಲಿ ಯಾವ ಶಿಕ್ಷೆ ಇದೆ?
ಮಧ್ಯಸೇವಿಸಿ ವಾಹನವನ್ನು ಓಡಿಸುತ್ತಿರುವಾಗ ಚಾಲಕನನ್ನು ಹಿಡಿದು ಪರೀಕ್ಷೆಗೆ ಒಳಪಡಿಸಿದಾಗ ಅವನ ರಕ್ತದಲ್ಲಿ ಅಲ್ಕೋಹಾಲ್ ಅಂಶವಿರುವುದು ದೃಡಪಟ್ಟರೆ ಅಥವಾ ಮಾದಕ ವಸ್ತುಗಳ ಪ್ರಭಾವಕ್ಕೆ ಒಳಗಾಗಿ ವಾಹನ ಓಡಿಸುತ್ತಿದ್ದು, ಮಾದಕ ವಸ್ತುವಿನ ಪ್ರಭಾವದಿಂದ ವಾಹನದ ಮೇಲೆ ಸರಿಯಾದ ನಿಯಂತ್ರಣ ಸಾಧ್ಯವಾಗದಿದ್ದಂತಹ ಸಂದರ್ಬದಲ್ಲಿ ಇಂತಹ ಚಾಲಕನ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಮೊದಲನೇ ಅಪರಾಧಕ್ಕೆ ೬ ತಿಂಗಳವರೆಗೆ ಕಾರಾಗೃಹ ಶಿಕ್ಷೆ ಅಥವಾ ರೂ.೧೦,೦೦೦ ವರೆಗೆ ದಂಡ ಅಥವಾ ಎರಡು, ಎರಡನೇ ಅಪರಾಧಕ್ಕೆ ೨ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಅಥವಾ ರೂ.೧೦,೦೦೦ ವರೆಗೆ ದಂಡ ಅಥವಾ ಎರಡು,

ಅಧಿಕಾರಿಗಳು ಯಾವಾಗ ಒಂದು ವಾಹನವನ್ನು ವಶಕ್ಕೆ ತೆಗೆದುಕೊಳ್ಳುತ್ತಾರೆ ?
ಈ ಕೆಳಕಂಡ ದಾಖಲಾತಿಗಳನ್ನು ಹಾಜರು ಪಡಿಸದಿದ್ದಲ್ಲಿ ಅಧಿಕಾರಿಗಳು ಒಂದು ವಾಹನವನ್ನು ವಶಕ್ಕೆ ಪಡೆಯಬಹುದು. ೧) ವಾಯಿದೆ ಇರದಿರುವ ಚಾಲನಾಪತ್ರ , ೨)ವಾಹನ ನೋಂದಣಿ ಪತ್ರ, ೩)ಪರವಾನಗಿ ಇಲ್ಲದಿರುವ ಸರಕು ಸಾಗಾಣೆ ವಾಹನ ಹಾಗೂ ೪) ತೆರಿಗೆ ಕಟ್ಟದಿರುವ ವಾಹನಗಳನ್ನು, ಮೋಟಾರು ವಾಹನ ಕಾಯ್ದೆ ೨೦೭ ರ ಪ್ರಕಾರ ವಶಕ್ಕೆ ಪಡೆಯಲು ಅಧಿಕಾರವಿದೆ.

ಅಧಿಕೃತ ಚಾಲನ ಪತ್ರವಿಲ್ಲದೆ ವಾಹನ ಚಲಾಯಿಸಿದರೆ ಎಂತಹ ಪರಿಣಾಮ ಎದುರಿಸಬೇಕಾಗುತ್ತದೆ?
ರೂ.೩೦೦/-ಗಳ ದಂಡ ತೆರಬೇಕಾಗುತ್ತದೆ.

ಸ್ಕೂಟರ್ ಮತ್ತು ಮೋಟಾರ್ ಸೈಕಲ್ ಓಡಿಸುವಾಗ ಸವಾರರು ಶಿರಸ್ತ್ರಾಣ ಧರಿಸುವುದು ಕಡ್ಡಾಯವೇ?
ಹೌದು, ಶಿರಸ್ತ್ರಾಣ ಧರಿಸುವುದು ಕಡ್ಡಾಯ. ನಿಯಮ ಉಲ್ಲಂಘಿಸಿದವರಿಗೆ ಸೆಕ್ಷನ್ ೧೭೭ ಎಂ.ವಿ.ಅಕ್ಟ್-೧೯೮೮ ರ ಪ್ರಕಾರ ರೂ.೫೦೦/- ದಂಡ ವಿಧಿಸಲಾಗುತ್ತದೆ.

ಮಾದಕ ಪಾನೀಯಗಳನ್ನು ಕುಡಿದು ವಾಹನ ಓಡಿಸಿದರೆ ಎಂತಹ ಪರಿಣಾಮ ಎದುರಿಸಬೇಕಾಗುತ್ತದೆ?
ಕುಡಿದು ವಾಹನ ಓಡಿಸುವಾಗ ನಿಮ್ಮನ್ನು ಅಧಿಕಾರಿಗಳು ಹಿಡಿದರೆ ನಿಮ್ಮಗೆ ನೀವು ಕುಡಿದು ವಾಹನ ಚಲಾಯಿಸ ಬಗ್ಗೆ ಕೋರ್ಟ್‌ಗೆ ಹಾಜರಾಗಿ ಸಮಜಾಯಿಸಿ ನೀಡಲು ನೋಟಿಸ್ ನೀಡಲಾಗುವುದು. ಈ ಕೇಸಿಗೆ ಸಂಬಂಧಿಸಿದಂತೆ ಸ್ಥಳದಲ್ಲೇ ದಂಡವನ್ನು ಸ್ವೀಕರಿಸುವುದಿಲ್ಲ. ನಿಮ್ಮ ಜೊತೆ ಕುಡಿಯದೇ, ಚಲನಾ ಪರವಾನಿಗೆ ಹೊಂದಿರುವ ಜೊತೆಗಾರ ಇರದ ಹೊರೆತು ನಿಮ್ಮನ್ನು ಮತ್ತೆ ಚಾಲನೆ ಮಾಡಿಕೊಂಡು ಹೋಗಲು ಅವಕಾಶ ನೀಡುವುದಿಲ್ಲ.

ಚಾಲಕನು ತನ್ನ ವಾಹನವನ್ನು ಚಾಲನೆ ಮಾಡುವಾಗ ಅವನ ಬಳಿ ಯಾವ ದಾಖಲಾತಿಗಳನು ಇಟ್ಟುಕೊಳ್ಳಬೇಕು ?
• ಚಾಲನ ಪರವಾನಿಗೆ/ನೋಂದಾಯಿತ ಪತ್ರಗಳು • ತೆರಿಗೆ ಪ್ರಯಾಣಪತ್ರ • ವಾಯುಮಾಲಿನ್ಯ ಪರೀಕ್ಷಣಾ ಪತ್ರ • ವಿಮಾ ದಾಖಲಾತಿ ಪತ್ರ • ಸದೃಡತೆ ಸರ್ಟಿಫಿಕೇಟ್ & ಅನುಮತಿ ಪತ್ರ (ಅದು ಸಾರಿಗೆ ವಾಹನವಾಗಿದ್ದಲ್ಲಿ) ಸ್ಥಳದಲ್ಲಿ ಸಂಚಾರದಂಡವನ್ನು ಸಂಗ್ರಹಿಸುವ ಅಧಿಕಾರವನ್ನು ಯಾರಿಗೆ ನೀಡಲಾಗಿದೆ? ಪೊಲೀಸ್ ಇಲಾಖೆಯ ಸಂಚಾರ ವಿಭಾಗದ ಸಭ್ ಇನ್ಸ್ಪೆಕ್ಟರ್ ಮಟ್ಟದ ಹಾಗೂ ಅದಕ್ಕಿಂತ ಹೆಚ್ಚಿನ ಅಧಿಕಾರವುಳ್ಳ ಅಧಿಕಾರಿಗಳಿಗೆ ಹಣ ಪಡೆದು ರಸೀತಿ ನೀಡುವ ಅಧಿಕಾರವನ್ನು ನೀಡಲಾಗಿದೆ.

ನನ್ನಲ್ಲಿ ದಂಡ ತೆರಲು ಹಣವಿಲ್ಲದಿದ್ದರೆ, ಎನು ಮಾಡಬೇಕು?
ಸೆಕ್ಟನ್ ೨೦೬(೨) ಎಂ.ವಿ ಅಕ್ಟ್ , ೧೯೮೮ ರ ಪ್ರಕಾರ , ನೀವು ದಂಡದ ಹಣವನ್ನು ಸ್ಥಳದಲ್ಲಿ ತೆರಲು ಸಾಧ್ಯವಿರದ ಸ್ಥಿತಿಯಲ್ಲಿ ಪೊಲೀಸ್ ಅಧಿಕಾರಿಯು ನಿಮ್ಮಲ್ಲಿರುವ ಅಸಲಿ ಚಲನಾ ಪತ್ರವನ್ನು ಅತನ ವಶಕ್ಕೆ ತೆಗೆದುಕೊಂಡು, ಒಂದು ವಾರದೊಳಗಾಗಿ ಸೂಚಿಸಿದ ನ್ಯಾಯಾಲದ ಮುಂದೆ ಹಾಜರಾಗುವಂತೆ ತಿಳಿಸಿ ಸೂಚನಾ ಪತ್ರವನ್ನು ನೀಡುತ್ತಾರೆ.

ಟ್ರಾಫಿಕ್ ಎನ್ಫೋರ್ಸ್ಮೆಂಟ್ ಕೇಂದ್ರದಿಂದ ನಾನು ಸೂಚನಾ ಪತ್ರ ಪಡೆದಿದ್ದೇನೆ? ಇದನ್ನು ಯಾವ ರೀತಿ ಪರಿಹರಿಸಿಕೊಳ್ಳಬೇಕು ?
ನೀವು ಎನ್ಪೋರ್ಸ್ಮೆಂಟ್ ಅಟೋಮೇಷನ್ ಸೆಂಟರ್, ನಂ. ೫, ಸಂಚಾರ ಕೇಂದ್ರ ಸ್ಥಾನ, ೫ ನೇ ಮಹಡಿ, ಇನ್ ಫ಼್ಯಾನ್ ಟ್ರಿ ರಸ್ತೆ, ಬೆಂಗಳೂರು ಅಥವಾ ಬೆಂಗಳೂರು ನಗರದಲ್ಲಿರುವ ಯಾವುದೇ ೪೨ ಸಂಚಾರ ಪೊಲೀಸ್ ಠಾಣೆಗಳಲ್ಲಿ ದಂಡವನ್ನು ಪಾವತಿಸಬಹುದು. ಅಲ್ಲದೆ ಬೆಂಗಳೂರು-ಒನ್ ಕೇಂದ್ರಗಳಲ್ಲಿಯೂ ಸಹ ಸೂಚನಾ ಪತ್ರದಲ್ಲಿರುವ ದಂಡದ ಹಣವನ್ನು ಪಾವತಿಸಿ ರಸೀತಿ ಪಡೆಯಬಹುದು.

ಅಸನ ಪಟ್ಟಿಯ ಬಗ್ಗೆ ನಿಯಮಗಳೇನು?
ಸೆಕ್ಷನ್ ೧೩೮ ಸಿಎಂವಿಆರ್ ರಿ/ವಿ ೧೭೭ ಎಂವಿಅಕ್ಟ್ ರ ಪ್ರಕಾರ ವಾಹನವನ್ನು ಚಲಿಸುವಾಗ ಚಾಲಕ ಮತ್ತು ಅತನ ಪಕ್ಕದಲ್ಲಿ ಮುಂಭಾಗ ಆಸನದಲ್ಲಿ ಕುಳಿತಿರುವ ವ್ಯಕ್ತಿಗಳು ಅಸನ ಪಟ್ಟಿಯನ್ನು ತೊಟ್ಟುಕೊಳ್ಳಬೇಕು.

ಚಾಲಕ ವಾಹನ ಓಡಿಸುವಾಗ ಮೊಬೈಲ್ಪೋನ್ನಲ್ಲಿ ಮಾತನಾಡಬಹುದೇ?
ಸೆಕ್ಷನ್ ೨೫೦(ಎ) ಎಂಎಂವಿಆರ್, ರಿ/ವಿ ೧೭೭ ಎಂ.ವಿ.ಅಕ್ಟ್, ರ ಪ್ರಕಾರ ಚಾಲಕನು ವಾಹನವನು ಚಾಲನೆ ಮಾಡುವಾಗ ಅಥವಾ ಮೋಟಾರ್ಸೈಕಲ್ನ್ನು ಓಡಿಸುವಾಗ ಮೊಬೈಲ್ ಪೋನ್ನ್ನು ಬಳಸುವಂತಿಲ್ಲ.

ಚಾಲಕನ ಹೊರೆತು ವಾಹನದಲ್ಲಿ ಪ್ರಯಾಣಿಸುವ ಇತರರು ಮೊಬೈಲ್ನ್ನು ಬಳಸಬಹುದೇ ?
ಹೌದು, ಚಾಲಕನ ಹೊರೆತು ವಾಹನದಲ್ಲಿ ಪ್ರಯಾಣಿಸುವ ಇತರರು ಮೊಬೈಲ್ನ್ನು ಬಳಸಬಹುದು.

ನಾನೊಬ್ಬ ವೈಧ್ಯನಾಗಿ, ವಾಹನ ಚಲಾಯಿಸುತ್ತಿರುವಾಗ ತುರ್ತು ಕರೆ ಬಂದರೆ ಅ ಕರೆಯನ್ನು ಸ್ವೀಕರಿಸಬಹುದೇ ?
ಇಲ್ಲಾ, ಮೋಟಾರ್ ವಾಹನ ಕಾಯಿದೆಯಡಿಯಲ್ಲಿ ಯಾರೊಬ್ಬರಿಗೂ ಕೂಡ ಈ ನಿಯಮಗಳಿಂದ ವಿನಾಯಿತಿ ನೀಡಿಲ್ಲ. ಅಂತಹ ಪರಿಸ್ಥಿತಿಯಲ್ಲಿ ತಾವು ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ನಂತರ ಕರೆಯನ್ನು ಸ್ವೀಕರಿಸಬಹುದು.

ತಾನು ಚಾಲನೆ ಮಾಡುತ್ತಿರುವ ವಾಹನವು, ಸಾವು/ತೀವ್ರ ಸ್ವರೂಪದ ಗಾಯ/ಅಸ್ತಿಗೆ ದಕ್ಕೆ ಮುಂತಾದ ಘಟನೆಗಳಿಗೆ ತುತ್ತಾದಾಗ ಅದನ್ನು ಚಾಲನೆ ಮಾಡುತ್ತಿದ್ದ ಚಾಲಕನ ಕರ್ತವ್ಯಗಳೇನು ?
ಕರ್ತವ್ಯಗಳು ಈ ರೀತಿ ಇರುತ್ತವೆ. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಬೇಕು, ಒಂದು ವೇಳೆ ವಾಹನವು ಪೆಟ್ರೋಲ್ ಅಥವಾ ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದರೆ, ಯಾರೂ ಅ ವಾಹನದ ಬಳಿ ಸುಳಿಯದಂತೆ ನೋಡಿಕೊಳ್ಳಬೇಕು. ಸ್ಥಳದ ಬಳಿ ಸಿಗರೇಟ್ ಸೇದದಂತೆ ಎಚ್ಚರಿಕೆ ವಹಿಸಬೇಕು ಮತ್ತು ವಾಹನದಲ್ಲಿ ಪ್ರಚಾರ ಪಡಿಸಿರುವ ಸುರಕ್ಷತಾ ನಿಯಮಗಳನ್ನು ತುರ್ತಾಗಿ ಪಾಲಿಸಬೇಕು.

ಎಂತಹ ಸಂದರ್ಬಗಳಲ್ಲಿ ಟೋಯಿಂಗ್ ವಾಹನವನ್ನು ಬಳಸಲಾಗುತ್ತದೆ ?
ಯಾವುದೇ ವ್ಯಕ್ತಿ ಸರಿಯಾದ ಕ್ರಮದಲ್ಲಿ ತನ್ನ ವಾಹನವನ್ನು ನಿಲ್ಲಿಸದೇ ಬಿಟ್ಟು ಹೋಗಿರುವ ಸಂದರ್ಬ, ವಾಹನದ ಬಗ್ಗೆ ಎಚ್ಚರಿಕೆ ವಹಿಸಲು ಯಾವುದೇ ವ್ಯಕ್ತಿ ಸ್ಥಳದಲ್ಲಿ ಇಲ್ಲದೇ ಇರುವುದು, ನಿಷೇಧಿಸಲ್ಪಟ್ಟ ಸ್ಥಳಗಳಲ್ಲಿ ವಾಹನವನ್ನು ನಿಲ್ಲಿಸಿರುವುದು ಇಲ್ಲವೇ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುವಂತಿದ್ದಂತಹ ಸಂದರ್ಬಗಳಲ್ಲಿ ಅ ವಾಹನವನ್ನು ಟೋಯಿಂಗ್ ವಾಹನ ಬಳೆಸಿ ಬೇರೆಡೆ ಸ್ಥಳಾಂತರಿಸಲಾಗುವುದು.

ಕುಡಿದು ವಾಹನ ಓಡಿಸಿದರೆ ಇಲ್ಲವೇ ಮಾದಕ ವಸ್ತುಗಳನ್ನು ಸೇವಿಸಿ ಅದರ ಪ್ರಭಾವದಿಂದ ವಾಹನ ಓಡಿಸಿದರೆ ಕಾನೂನಿನಲ್ಲಿ ಯಾವ ಶಿಕ್ಷೆ ಇದೆ?
ಮಧ್ಯಸೇವಿಸಿ ವಾಹನವನ್ನು ಓಡಿಸುತ್ತಿರುವಾಗ ಚಾಲಕನನ್ನು ಹಿಡಿದು ಪರೀಕ್ಷೆಗೆ ಒಳಪಡಿಸಿದಾಗ ಅವನ ರಕ್ತದಲ್ಲಿ ಅಲ್ಕೋಹಾಲ್ ಅಂಶವಿರುವುದು ದೃಡಪಟ್ಟರೆ ಅಥವಾ ಮಾದಕ ವಸ್ತುಗಳ ಪ್ರಭಾವಕ್ಕೆ ಒಳಗಾಗಿ ವಾಹನ ಓಡಿಸುತ್ತಿದ್ದು, ಮಾದಕ ವಸ್ತುವಿನ ಪ್ರಭಾವದಿಂದ ವಾಹನದ ಮೇಲೆ ಸರಿಯಾದ ನಿಯಂತ್ರಣ ಸಾಧ್ಯವಾಗದಿದ್ದಂತಹ ಸಂದರ್ಬದಲ್ಲಿ ಇಂತಹ ಚಾಲಕನ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಮೊದಲನೇ ಅಪರಾಧಕ್ಕೆ ೬ ತಿಂಗಳವರೆಗೆ ಕಾರಾಗೃಹ ಶಿಕ್ಷೆ ಅಥವಾ ರೂ.೧೦,೦೦೦ ವರೆಗೆ ದಂಡ ಅಥವಾ ಎರಡು, ಎರಡನೇ ಅಪರಾಧಕ್ಕೆ ೨ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಅಥವಾ ರೂ.೧೦,೦೦೦ ವರೆಗೆ ದಂಡ ಅಥವಾ ಎರಡು,

ಅಧಿಕಾರಿಗಳು ಯಾವಾಗ ಒಂದು ವಾಹನವನ್ನು ವಶಕ್ಕೆ ತೆಗೆದುಕೊಳ್ಳುತ್ತಾರೆ ?
ಈ ಕೆಳಕಂಡ ದಾಖಲಾತಿಗಳನ್ನು ಹಾಜರು ಪಡಿಸದಿದ್ದಲ್ಲಿ ಅಧಿಕಾರಿಗಳು ಒಂದು ವಾಹನವನ್ನು ವಶಕ್ಕೆ ಪಡೆಯಬಹುದು. ೧) ವಾಯಿದೆ ಇರದಿರುವ ಚಾಲನಾಪತ್ರ , ೨)ವಾಹನ ನೋಂದಣಿ ಪತ್ರ, ೩)ಪರವಾನಗಿ ಇಲ್ಲದಿರುವ ಸರಕು ಸಾಗಾಣೆ ವಾಹನ ಹಾಗೂ ೪) ತೆರಿಗೆ ಕಟ್ಟದಿರುವ ವಾಹನಗಳನ್ನು, ಮೋಟಾರು ವಾಹನ ಕಾಯ್ದೆ ೨೦೭ ರ ಪ್ರಕಾರ ವಶಕ್ಕೆ ಪಡೆಯಲು ಅಧಿಕಾರವಿದೆ.

ಅಧಿಕೃತ ಚಾಲನ ಪತ್ರವಿಲ್ಲದೆ ವಾಹನ ಚಲಾಯಿಸಿದರೆ ಎಂತಹ ಪರಿಣಾಮ ಎದುರಿಸಬೇಕಾಗುತ್ತದೆ?
ರೂ.೧೦೦೦/-ಗಳ ದಂಡ ತೆರಬೇಕಾಗುತ್ತದೆ. ಸ್ಕೂಟರ್ ಮತ್ತು ಮೋಟಾರ್ ಸೈಕಲ್ ಓಡಿಸುವಾಗ ಸವಾರರು ಶಿರಸ್ತ್ರಾಣ ಧರಿಸುವುದು ಕಡ್ಡಾಯವೇ? ಹೌದು, ಶಿರಸ್ತ್ರಾಣ ಧರಿಸುವುದು ಕಡ್ಡಾಯ. ನಿಯಮ ಉಲ್ಲಂಘಿಸಿದವರಿಗೆ ಸೆಕ್ಷನ್ ೧೭೭ ಎಂ.ವಿ.ಅಕ್ಟ್-೧೯೮೮ ರ ಪ್ರಕಾರ ರೂ.೧೦೦/- ದಂಡ ವಿಧಿಸಲಾಗುತ್ತದೆ.

ಮಾದಕ ಪಾನೀಯಗಳನ್ನು ಕುಡಿದು ವಾಹನ ಓಡಿಸಿದರೆ ಎಂತಹ ಪರಿಣಾಮ ಎದುರಿಸಬೇಕಾಗುತ್ತದೆ?
ಕುಡಿದು ವಾಹನ ಓಡಿಸುವಾಗ ನಿಮ್ಮನ್ನು ಅಧಿಕಾರಿಗಳು ಹಿಡಿದರೆ ನಿಮ್ಮಗೆ ನೀವು ಕುಡಿದು ವಾಹನ ಚಲಾಯಿಸ ಬಗ್ಗೆ ಕೋರ್ಟ್ಗೆ ಹಾಜರಾಗಿ ಸಮಜಾಯಿಸಿ ನೀಡಲು ನೋಟಿಸ್ ನೀಡಲಾಗುವುದು. ಈ ಕೇಸಿಗೆ ಸಂಬಂಧಿಸಿದಂತೆ ಸ್ಥಳದಲ್ಲೇ ದಂಡವನ್ನು ಸ್ವೀಕರಿಸುವುದಿಲ್ಲ. ನಿಮ್ಮ ಜೊತೆ ಕುಡಿಯದೇ, ಚಲನಾ ಪರವಾನಿಗೆ ಹೊಂದಿರುವ ಜೊತೆಗಾರ ಇರದ ಹೊರೆತು ನಿಮ್ಮನ್ನು ಮತ್ತೆ ಚಾಲನೆ ಮಾಡಿಕೊಂಡು ಹೋಗಲು ಅವಕಾಶ ನೀಡುವುದಿಲ್ಲ.
ಅಥವಾ
ನೀವು ಕೋರ್ಟಿಗೆ ಹಾಜರಾಗಿ ದಂಡವನ್ನು ಕಟ್ಟುವವರಿಗೂ ನಿಮ್ಮ ವಾಹನವನ್ನು ಪೊಲೀಸ್ ಠಾಣೆಯಲ್ಲಿ ಬಿಟ್ಟು ಹೋಗಲು ಸಲಹೆ ನೀಡಲಾಗುವುದು. ಕೋರ್ಟಿನಲ್ಲಿ ದಾವೆ ಮುಗಿಯುವವರೆಗೂ ನಿಮ್ಮ ಚಾಲನ ಪರವಾನಿಗೆ ಪತ್ರವನ್ನು ಪೊಲೀಸ್ ಠಾಣೆಯಲ್ಲಿ ಇಟ್ಟು ಕೊಳ್ಳಲಾಗುವುದು.
ನೀವು ಮತ್ತೆ ಇದೇ ರೀತಿಯ ತಪ್ಪನು ಮತ್ತೆ ಮಾಡಿದರೆ, ಅಪರಾಧವನ್ನು ಪುನರಾವರ್ತನೆ ಮಾಡಿದಕ್ಕಾಗಿ ನ್ಯಾಯಲವು ನಿಮ್ಮಗೆ ದಂಡ ಮತ್ತು ಶಿಕ್ಷೆ ಎರಡನ್ನು ವಿಧಿಸುತ್ತದೆ. ಒಂದು ವೇಳೆ ಇಂತಹ ಚಾಲನೆಯಿಂದ ವ್ಯಕ್ತಿ ಮರಣ ಹೊಂದಿದರೆ ನಿಮ್ಮ ಮೇಲೆ ಜಾಮೀನು ರಹಿತ ಉದ್ದೇಶರಹಿತಿ ಕೊಲೆ ಮೊಕದ್ದಮೆ ( ಕಲ್ಪೆಬಲ್ ಹೋಮಿಸೈಡ್) ಹೂಡಲಾಗುವುದು.

.

ವಾಹನದ ಎಲ್ಲಾ ದಾಖಲಾತಿಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳುವ ಬಗ್ಗೆ.
ಉ: u/s ೮೭(೫) ಞmv ಡಿuಟes ಯಾವುದೇ ವಾಹನಗಳ ಚಾಲಕರಾಗಲೀ, ಸವಾರರಾಗಳೇ ಸಾರಿಗೆ ಅಧಿಕಾರಿಯಿಂದ ಮಾಸ್ಟರ್ ಪಾಸ್ ಹೊಂದಿದ್ದರೆ, ಅಂತಹವರು ಚಾಲನಾ ಪತ್ರ, ವಾಹನ ನೊಂದಣಿ ಪುಸ್ತಕ, ತೆರಿಗೆ ಪತ್ರ, ವಿಮಾ ಪತ್ರ ಇಟ್ಟುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಟ್ರಾನ್ಸ್ಪೋರ್ಟ್ ವಾಹನಗಳಾದ ಬಸ್ಸುಗಳು, ಲಾರಿಗಳು ಇತರೇ, ಇವರು ಸಾರಿಗೆ ಅಧಿಕಾರಿಯಿಂದ ಸ್ವೀಡ್ ಪಾಸ್ ಹೊಂದಿದ್ದರೆ, ಇವರುಗಳು ವಾಹನ ನೊಂದಣಿ ಪುಸ್ತಕ, ತೆರಿಗೆ ಪತ್ರ, ವಿಮಾ ಪತ್ರ, ಫಿಟ್ನೆಸ್ ಪ್ರಮಾಣಪತ್ರ ಹಾಗೂ ಪರವಾನಗಿ ಇಟ್ಟುಕೊಳ್ಳುವ ಅವಶ್ಯಕತೆ ಇರುವುದಿಲ್ಲ.

ಯಾವ ದರ್ಜೆಯ ಅಧಿಕಾರಿಗೆ ಸ್ಥಳದಂಡ ವಿಧಿಸುವ ಅಧಿಕಾರವಿದೆ.
ಉ: ಎ.ಎಸ್.ಐ, ಪಿ.ಎಸ್.ಐ ಮತ್ತು ಪಿ.ಐ ರವರು ಸ್ಥಳದಂಡ ಪಡೆದು ರಸೀದಿ ಕೊಡುವ ಅಧಿಕಾರ ಹೊಂದಿರುತ್ತಾರೆ. ಆದರೆ ಯಾವುದೇ ಹೆಚ್.ಸಿ ರವರುಗಳಾಗಲೇ, ಪಿ.ಸಿ ರವರುಗಳಾಗಲೀ ಸ್ಥಳದಂಡ ಹಾಕುವ ಅಧಿಕಾರವಿರುವುದಿಲ್ಲ. ಇವರು ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನದ ಸವಾರರ/ಚಾಲಕರ ವಾಹನ ಸಂಖ್ಯೆ ಎಫ್.ಟಿ.ವಿ.ಆರ್ ಪುಸ್ತಕದಲ್ಲಿ ನಮೂದಿಸಬೇಕು, ಹೀಗೆ ಮಾಡಿದ ವಾಹನದ ಪಟ್ಟಿಯನ್ನು ಅಟೋಮೇಷನ್ ಸೆಂಟರ್ನಲ್ಲಿ ವಾಹನದ ಮಾಲೀಕರ ವಿಳಾಸಕ್ಕೆ ೧೩೩ ನೊಟೀಸ್ ಕಳುಹಿಸಲಾಗುವುದು. ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನದ ಸವಾರರು/ಚಾಲಕರು ದಂಡದ ಹಣವನ್ನು ಬೆಂಗಳೂರು ನಗರದ ಎಲ್ಲಾ ಸಂಚಾರ ಪೊಲೀಸ್ ಠಾಣೆಯಲ್ಲಾಗಲಿ, ಬೆಂಗಳೂರು ಒನ್ ರಲ್ಲಾಗಲಿ, ವೆಬ್ಸೈಟ್(www.btp.gov.in) ನಲ್ಲಾಗಲೀ ದಂಡ ಪಾವತಿಸಿ ರಸೀತಿ ಪಡೆಯಬಹುದು.

ಮದ್ಯಪಾನ ಮಾಡಿ ವಾಹನ ನಡೆಸಿದ ವ್ಯಕ್ತಿಯ ದಂಡವನ್ನು ಸ್ಥಳದಲ್ಲಿ ಪಡೆಯಬಹುದೇ?
ಉ: ಮದ್ಯಪಾನ ಮಾಡಿ ವಾಹನ ನೆಡೆಸಿದ ಸವಾರ/ಚಾಲಕರಿಂದ ಸ್ಥಳದಂಡ ಪಡೆಯಬಾರದು, ನೋಟೀಸ್ ನೀಡಿ ಸಂಚಾರ ನ್ಯಾಯಾಲಯದಲ್ಲಿ ಒಂದು ವಾರದ ಒಳಗೆ ಪಾವತಿಸುವಂತೆ ಸೂಚಿಸಬೇಕು. ನ್ಯಾಯಾಲಯದಲ್ಲಿ ದಂಡ ಕಟ್ಟದಿದ್ದಲ್ಲಿ, ನ್ಯಾಯಾಲಯವು ಸದರಿ ಆರೋಪಿಗೆ ವಾರೆಂಟ್ ನೀಡುತ್ತದೆ, ಆತನನ್ನು ದಸ್ತಗಿರಿ ಮಾಡಿ ಕೋರ್ಟಿಗೆ ಹಾಜರ್ ಪಡಿಸಿ ದಂಡ ಕಟ್ಟಿಸಬೇಕು. ಈ ವ್ಯಕ್ತಿಗೆ ರೂ.೨೦೦೦/- ದಿಂದ ರೂ.೩೦೦೦/- ದವರೆಗೆ ದಂಡ ವಿಧಿಸಬಹುದು.

ಪೊಲ್ಯೂಷನ್ ತಪಾಸಣೆ ಮಾಡುವ ಬಗ್ಗೆ.
ಉ: ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ಅನ್ನು ಯಾರೇ ಆಗಲಿ ತಪಾಸಣೆ ಮಾಡಬಾರದು, ದಂಡವನ್ನು ಹಾಕಬಾರದು, ಆದರೆ ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ಅನ್ನು ಮಾಡಿಸಿ ಎಂದು ತಿಳುವಳಿಕೆ ನೀಡಬಹುದು.

ವಾಹನ ಮಾರಾಟವಾದರೂ ಸಹ ಸಂಚಾರ ನಿಯಮ ಉಲ್ಲಂಘನೆಯ ನೋಟೀಸ್ ಬರುತ್ತಿದೆ-ಕಾರಣ ?
ಉ: ಯಾರೇ ಆಗಲಿ ವಾಹನವನ್ನು ಮಾರಾಟ ಮಾಡಿದರೆ ಕೂಡಲೆ ಸಂಬಂಧಪಟ್ಟ ಸಾರಿಗೆ ಕಛೇರಿಗೆ ಹೋಗಿ ಯಾರಿಗೆ ವಾಹನ ಮಾರಾಟ ಮಾಡಿದೆ ಎಂಬುದರ ವಿವರ ನೀಡಿ ವಾಹನ ಪಡೆದವರ ಹೆಸರು ವಿಳಾಸ ಕೊಟ್ಟು ಬದಲಾಯಿಸಬೇಕು, ಇಲ್ಲದಿದ್ದರೆ ಏನೇ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದರೂ ಸಹ ಮೊದಲಿನ ವಾಹನ ಮಾಲೀಕನ ಹೆಸರಿಗೆ ನೋಟೀಸ್ ಬರುತ್ತದೆ. ಅಲ್ಲದೆ ಘೋರ ಅಪಘಾತ, ಟೆರರಿಸ್ಟ್ ಬಗ್ಗೆ, ಹೀಗೆ ತೊಂದರೆಗೊಳಗಾಗಬೇಕಾಗುತ್ತದೆ. ವಾಹನ ಪಡೆದವರೂ ಸಹ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳಬೇಕು, ಇದರಲ್ಲಿ ವಾಹನ ಮಾರಾಟ ಮಾಡಿದ ವಾಹನ ಮಾಲೀಕನ ಜವಾಬ್ದಾರಿ ಹೆಚ್ಚು ಇರುತ್ತದೆ.

ಅಪಘಾತದಲ್ಲಿ ವಾಹನ ಜಖಂ ಆದರೆ ಇದರಲ್ಲಿ ಪೊಲೀಸರ ಪಾತ್ರವೇನು ?
ಉ: ಅಪಘಾತದಲ್ಲಿ ವಾಹನ ಜಖಂ ಆದರೆ ಫಿರ್ಯಾದಿ ಪಡೆದು ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು, ಹಾಗೂ ಕೋರ್ಟಿನಲ್ಲಿ ಬಗೆಹರಿಸಿಕೊಳ್ಳಬೇಕು, ಫಿರ್ಯಾದಿ ರಾಜಿ ಮಾಡಿಕೊಳ್ಳಬಹುದು ಇಲ್ಲದಿದ್ದರೆ ವಿಮಾ ಕಂಪನಿಯಿಂದ ಕ್ಲೈಂ ಪಡೆದುಕೊಳ್ಳಬಹುದು (ಪೊಲೀಸರಿಂದ ಸ್ವೀಕೃತಿ ಪಡೆದು).

ಜಂಕ್ಷನ್ನ್ನಲ್ಲಿ ಗ್ರೀನ್ ಲೈಟ್ ಇದ್ದರೂ, ಸ್ಟಾಪ್ ಲೈನ್ ಕ್ರಾಸ್ ಮಾಡಿ ಮುಂದೆ ಹೋಗಲು ಮುಂದೆ ಟ್ರಾಫಿಕ್ ಜಾಮ್ ಆಗಿದ್ದರೆ ?
ಉ: ಗ್ರೀನ್ ಲೈಟ್ ಇದ್ದರೂ ಸಹ ಮುಂದಿನ ಟ್ರಾಫಿಕ್ ಕ್ಲಿಯರ್ ಆಗುವವರೆಗೂ ಮುಂದೆ ಹೋಗಬಾರದು. ಹಳದಿ ಲೈಟ್ ಬಂದರೆ ಹೋಗಬಾರದು ಹಳದಿ ದೀಪ ನಿಲ್ಲಿಸುವ ಸೂಚನೆ, ಕೆಂಪು ದೀಪ ನಿಲ್ಲಿ ಎಂದು ಆದೇಶ ನೀಡುತ್ತದೆ ಹಸಿರು ಮುಂದೆ ಹೋಗಲು ಸೂಚನೆ ನೀಡುತ್ತದೆ. ಹಳದಿ ದೀಪದಲ್ಲಿ ಹೋದರೆ ದಂಡ ತೆರಬೇಕಾಗುತ್ತದೆ. ಆದರೂ ಸಹ ಸಲಹೆ/ತಿಳುವಳಿಕೆ ನೀಡಬಹುದು.

ಸಿಟಿ ಒಳಗೆ ಇರುವ ವೇಗಮಿತಿ ಫಲಕ.
ಕರ್ತವ್ಯಗಳು ಈ ರೀತಿ ಇರುತ್ತವೆ. ಉ: ಗೆಜೆಟ್ ನೋಟಿಫಿಕೇಷನ್ ಪ್ರಕಾರ ಸಿಟಿ ಕಾರ್ಪೊರೇಷನ್ ಸರಹದ್ದಿನ ವೇಗದ ಮಿತಿ ಗಂಟೆಗೆ ೫೦ ಕಿ.ಮೀ. ಲಘು ಮೋಟಾರು ವಾಹನಕ್ಕೆ ಮತ್ತು ಗಂಟೆಗೆ ೪೦ ಕಿ.ಮೀ. ಭಾರಿ ಮೊಟಾರು ವಾಹನಕ್ಕೆ . ಎಲ್ಲಾ ರಸ್ತೆಗೂ ವೇಗದ ಮಿತಿ ಫಲಕ ಹಾಕಲು ಸಾಧ್ಯವಿಲ್ಲ ಸುಮಾರು ನಾಲ್ಕು ಸಾವಿರ ಕಿ.ಮೀ. ನಗರ ಸರಹದ್ದು ಇದೆ, ದೇವನಹಳ್ಳಿ ರಸ್ತೆ, ಮೈಸೂರು ರಸ್ತೆ, ಮತ್ತು ಹೊರ ವರ್ತುಲ ರಸ್ತೆ ಕಡೆಗಳಲ್ಲಿ ಫಲಕದ ಅವಶ್ಯಕತೆ ಇರುತ್ತದೆ.

ಪಾರ್ಕಿಂಗ್ ನಿಯಮ ಉಲ್ಲಂಘನೆಯ ಬಗ್ಗೆ.
ಉ: ಗೆಜೆಟ್ ನೋಟಿಫಿಕೇಷನ್ ಇಲ್ಲದೆ ಯಾವುದೇ ವಾಹನ ನಿಲುಗಡೆ ನಿಷೇಧ ಫಲಕಗಳನ್ನು ಹಾಕುವುದಿಲ್ಲ ಸಾಮಾನ್ಯವಾಗಿ ೫೦ಮೀ ಗೆ ಒಂದರಂತೆ ಫಲಕ ಹಾಕಬೇಕು. ಆದರೆ ಪ್ರತಿಯೊಂದು ವಾಹನದ ಮುಂದೆ ಫಲಕ ಹಾಕಲು ಸಾಧ್ಯವಿಲ್ಲ.

ಪೀಕ್ ಹವರ್ ನಲ್ಲಿ ಸಿಬ್ಬಂದಿ ಸಿಗ್ನಲ್ ದೀಪದ ಸ್ವಿಚ್ ಆಫ್ ಮಾಡುವ ಬಗ್ಗೆ.
ಉ: ಸಿಗ್ನಲ್ ಸ್ವಿಚ್ ಆಫ್ ಮಾಡಿ ಪೀಕ್ ಹವರ್ ನಲ್ಲಿ ಕ್ಲಿಯರ್ ಮಾಡುವುದು ಸರಿಯಲ್ಲ ಸಿಗ್ನಲ್ ಆಫ್ ಮಾಡಿ ಒಂದೇ ಕಡೆ ಕ್ಲಿಯರ್ ಮಾಡುತ್ತಿದ್ದರೆ ಮತ್ತೊಂದು ಕಡೆ ಟ್ರಾಫಿಕ ಬೆಳೆದುಕೊಂಡು ಹೋಗುತ್ತದೆ. ಸಿಗ್ನಲ್ ಆಫ್ ಮಾಡದೆ ಆಟೋಮೆಟಿಕ್ನಲ್ಲಿ ನಡೆಸಿದರೆ ಎಲ್ಲಾ ಕಡೆಯಲ್ಲಿಯೂ ಜಂಕ್ಷನ್ನಲ್ಲಿ ಟ್ರಾಫಿಕ್ ಕ್ಲಿಯರ್ ಆಗುತ್ತಿರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ರಸ್ತೆಗಳಲ್ಲಿ ನೀರು ನಿಂತು, ಪ್ರತಿಭಟನೆ, ರಸ್ತಾ ರೋಕೋ ಹಾಗೂ ಗಣ್ಯ ವ್ಯಕ್ತಿಗಳು ಮತ್ತು ಅತಿ ಗಣ್ಯ ವ್ಯಕ್ತಿಗಳು ಸಂಚರಿಸುವ ಸಂದರ್ಭಗಳಲ್ಲಿ ಮಾತ್ರ ತಾತ್ಕಾಲಿಕವಾಗಿ ಕೆಲವು ನಿಮಿಷಗಳು ಸಿಗ್ನಲ್ ಆಫ್ ಮಾಡಬಹುದು, ಅದು ಮೇಲಾಧಿಕಾರಿಗಳ ಅನುಮತಿ ಪಡೆದು.

ಸ್ಥಳದಂಡ ಕಟ್ಟದಿರುವವರಿಗೆ ಮುಂದಿನ ಕ್ರಮದ ಬಗ್ಗೆ ?
ಉ: ಸಂಚಾರ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಯು ಸ್ಥಳದಂಡ ಪಾವತಿಸಲು ನಿರಾಕರಿಸಿದರೆ ಆತನ ಮೂಲ ಚಾಲನಾ ಪತ್ರವನ್ನು ವಶಕ್ಕೆ ಪಡೆದು ಸ್ವೀಕೃತಿ ನೀಡಬೇಕು, ಪೊಲೀಸ್ ನೋಟೀಸನ್ನು ನೀಡಿ ಒಂದು ವಾರ ಸಮಯ ನೀಡಬೇಕು, (As per Section 2006(2) of the Motor Vehicle Act-1988) ಮೂಲ ಪ್ರತಿ ಚಾಲನಾ ಪತ್ರ ವಿಲ್ಲದಿದ್ದರೆ ವಾಹನವನ್ನು ವಶದಲ್ಲಿಟ್ಟುಕೊಳ್ಳಬೇಕು. ಕೋರ್ಟಿಗೂ ಹೋಗಿ ದಂಡ ಕಟ್ಟದಿದ್ದಲ್ಲಿ, ಕೋರ್ಟಿನಿಂದ ವಾರೆಂಟ್ ತರಿಸಬೇಕು. ನಂತರ ಸದರಿಯವರನ್ನು ದಸ್ತಗಿರಿ ಮಾಡಿ ಕೋರ್ಟಿಗೆ ಹಾಜರ್ ಪಡಿಸಬೇಕು. ಕೋರ್ಟಿಗೆ ನೋಟಿಸ್/ಚಾರ್ಜ್ಶೀಟ್ ಕಳಿಸುವ ಮೊದಲು ಸ್ಥಳದಂಡ ಕಟ್ಟಲು ತಯಾರ್ ಇದ್ದರೆ. ಕಟ್ಟಿಸಿಕೊಳ್ಳಬಹುದು.

ಚಾಲಕನು ವಾಹನ ನಡೆಸುವಾಗ ಯಾವ ದಾಖಲಾತಿಗಳನ್ನು ಹೊಂದಿರಬೇಕು?
ಉ:ವಾಹನ ನಡೆಸುವಾಗ ಚಾಲಕನು ಡಿ.ಎಲ್, ಇನ್ಸುರೆನ್ಸ್, ಆರ್.ಸಿ ಮತ್ತು ಟ್ಯಾಕ್ಸ್ ಕಾರ್ಡ್ನ ಮೂಲ ಪ್ರತಿಗಳನ್ನು ಇಟ್ಟುಕೊಳ್ಳಬೇಕು. ಆರ್.ಟಿ.ಓ ಅಧಿಕಾರಿಯಿಂದ ಮಾಸ್ಟರ್ಪಾಸ್ ಮಾಡಿಸಿಕೊಂಡಿದ್ದರೆ, ಈ ಎಲ್ಲಾ ದಾಖಲಾತಿ ಇಟ್ಟುಕೊಳ್ಳುವುದು ಅವಶ್ಯಕತೆ ಇರುವುದಿಲ್ಲ. ಯಾವುದೇ ಚಾಲಕ/ಸವಾರನು ತಪ್ಪು ಮಾಡಿ ಸ್ಥಳದಂಡ ಕಟ್ಟಲು ನಿರಾಕರಿಸಿದರೆ, ಅಥವಾ ನೋಟೀಸ್ ಪಡೆಯಲು ನಿರಾಕರಿಸಿದರೆ, ಹೆಸರು ವಿಳಾಸ ಹೇಳದಿದ್ದರೆ, ಸಹಿ ಮಾಡಲು ನಿರಾಕರಿಸಿದರೆ ಆತನ ವಾಹನ ವಶಕ್ಕೆ ಪಡೆದು ಸೆಕ್ಷನ್ 179(A) (B) MV Act ಪ್ರಕಾರ ಕ್ರಮ ಕೈಗೊಳ್ಳಬಹುದು.

ಮದ್ಯಪಾನ ಮಾಡಿ ವಾಹನ ನಡೆಸಿದ ವಾಹನ ಚಾಲಕನಿಗೆ ದಂಡ ಕಟ್ಟುವ ಬಗ್ಗೆ.
ಉ: ಮದ್ಯಪಾನ ಮಾಡಿ ವಾಹನ ನಡೆಸಿದ ಸವಾರ/ಚಾಲಕನಿಗೆ ಮೊದಲು ಆಲ್ಕೋಮೀಟರ್ ನಿಂದ ಚೆಕ್ ಮಾಡಿ ಅದರಲ್ಲಿ ೪೦ ಎಂ.ಜಿ ಅಥವಾ ೧೦೦ ಮಿಲೀ ಆಲ್ಕೋಹಾಲ್ ರಕ್ತದಲ್ಲಿದ್ದರೆ ಮಾತ್ರ ಡ್ರಿಂಕ್ & ಡ್ರೈವ್ ಕೇಸು ದಾಖಲಿಸಬೇಕು. ಇದರಲ್ಲಿ ಸ್ಥಳದಂಡ ವಸೂಲಿ ಮಾಡಬಾರದು, ಆಲ್ಕೋಮೀmರ್ನಿಂದ ಬಂದ ಎರಡು ರಶೀದಿಯಲ್ಲಿ ಒಂದನ್ನು ಆರೋಪಿಗೆ ನೋಟಿಸ್ನ ಜೊತೆಯಲ್ಲಿ ಕೊಟ್ಟು ಒಂದು ವಾರದ ಒಳಗೆ ಕೋರ್ಟ್ನಲ್ಲಿ ಹಣ ಪಾವತಿಸಲು ಸೂಚನೆ ನೀಡಬೇಕು. ಹಾಗೂ ವಾಹನವನ್ನು ತಮ್ಮ ವಶಕ್ಕೆ ಪಡೆಯಬೇಕು. ಆರ್.ಸಿ ಪುಸ್ತಕ ಅಥವಾ ಡಿ.ಎಲ್ ಹಾಜರುಪಡಿಸಿದರೆ, ಮದ್ಯಪಾನ ಮಾಡದಿರುವ ವ್ಯಕ್ತಿಯನ್ನು ಆರೋಪಿ ಕರೆತಂದರೆ ಆತನ ವಶಕ್ಕೆ ವಾಹನ ಕೊಡಬಹುದು. ಸದರಿ ಆರೋಪಿಗೆ ಕೋರ್ಟ್ ೬ ತಿಂಗಳವರೆಗೆ ಶಿಕ್ಷೆ ಅಥವಾ ೨೦೦೦/- ಸಾವಿರ ರೂ ವರೆಗೆ ದಂಡ ಹಾಕಬಹುದು. ೨ನೇ ಬಾರಿ ಸದರಿ ಆರೋಪಿ ಮದ್ಯಪಾನ ಮಾಡಿ ಸಿಕ್ಕಿ ಕೊಂಡರೆ ಆತನಿಗೆ ರೂ ೩೦೦೦/- ವರೆಗೆ ದಂಡ ವಿಧಿಸಬಹುದು.
ಅಪಘಾತ ನೆಡೆದಾಗ ಸಾರ್ವಜನಿಕರು ಮಾಡುವ ಕ್ರಮ? ಉ: ಯಾವುದೇ ವಾಹನ ಸ/ಚಾಲಕನಾಗಲಿ, ಪಾದಚಾರಿಯಾಗಲಿ ಅಪಘಾತಕ್ಕೀಡಾದಾಗ ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಬೇಕು, ನಂತರ ಪೊಲೀಸರಿಗೆ ಮಾಹಿತಿ ನೀಡಬೇಕು ಹಾಗು ಗಾಯಾಳುವಿಗೆ ಜ್ಜಾನವಿದ್ದರೆ ಹೆಸರು, ವಿಳಾಸ ಹಾಗು ಸಂಭಂದಿಕರ ದೂರವಾಣಿ ಸಂಖ್ಯೆ ತಿಳಿದುಕೊಳ್ಳಬೇಕು, ವಾಹನ ನೊಂದಣಿ ಸಂಖ್ಯೆ ಮತ್ತು ಘಟನೆ ನೋಡಿದವರ ವಿವರ ಪಡೆಯಬೇಕು.

ಬಿ.ಎಂ.ಟಿ.ಸಿ ಚಾಲಕರು ಟ್ರಾಫಿಕ್ ವೈಲೇಶನ್ ಮಾಡಿದಾಗ ಯಾವ ರೀತಿ ಕ್ರಮ ಕೈಗೊಳ್ಳುತ್ತೀರಿ?
ಉ: ಬಿ.ಎಂ.ಟಿ.ಸಿ ಚಾಲಕರು ಟ್ರಾಫಿಕ್ ವೈಲೇಶನ್ ಮಾಡಿದರೆ ಅವರಿಗೆ ಯಾವುದೇ ರಿಯಾಯಿತಿ ಇರುವುದಿಲ್ಲ. ನಗರದಲ್ಲಿ ಸುಮರು ೨೩ಲಕ್ಷ ದ್ವಿಚಕ್ರ ವಾಹನಗಳಿವೆ. ಅದರೆ ಬಿ.ಎಂ.ಟಿ.ಸಿ ಬಸ್ಗಳು ಸುಮಾರು ೬೦೦೦ ಮಾತ್ರ ಇವೆ. ದ್ವಿಚಕ್ರ ವಾಹನಗಳು ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಮಾಡುತ್ತವೆ. ಆದ್ದರಿಂದ ೪೧% ಸದರಿ ವಾಹನಗಳ ಮೇಲೆ ಕೇಸು ದಾಖಲಾಗುತ್ತಿದೆ. ಬಿ.ಎಂ.ಟಿ.ಸಿ ಬಸ್ಗಳು ಟ್ರಾಫಿಕ್ ವೈಲೇಶನ್ ಮಾಡಿ ರಸ್ತೆಯಲ್ಲಿ ನಿಲ್ಲಿಸಿಕೊಂಡಾಗ ಟ್ರಾಫಿಕ್ ಜಾಮ್ ಆಗಿ ಬಸ್ ನಲ್ಲಿರುವ ಸುಮಾರು ೬೦ ಜನ ಪ್ರಯಾಣಿಕರಿಗೆ ತೊಂದರೆ ಯಾಗುತ್ತಿದೆ. ಈ ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ಸುಮಾರು ಘಂಟೆಗಳು ಬೇಕಾಗುತ್ತದೆ, ಆದ ಕಾರಣ ಬಿ.ಎಂ.ಟಿ.ಸಿ ಚಾಲಕರು ವೈಲೇಶನ್ ಮಾಡಿದಾಗ ಬಸ್ ನಂಬರ್, ಡಿಪೋ ನಂಬರ್,ವೇಳೆ, ಸ್ಥಳ ವನ್ನು ಎಫ್.ಟಿ.ವಿ.ಆರ್ ನಲ್ಲಿ ನೋಟ್ ಮಾಡಿ ಸಂಬಂದಪಟ್ಟ ಡಿಪೋ ಮೇನೆಜರ್ಗೆ ನೋಟಿಸ್ ಕಳುಹಿಸಬಹುದು. ಸಂಬಂದಪಟ್ಟ ಚಾಲಕರನ್ನು ಕರೆಸಿ ಡಿಪೊಮೇನೆಜರ್ ರವರು ಚಾಲಕನ ಸಂಬಳದಲ್ಲಿ ಕಡಿತಗೊಳಿಸುತ್ತಿದ್ದಾರೆ. ೨೦೦೯ರಲ್ಲಿ ೧೦ತಿಂಗಳಲ್ಲಿ ಸುಮಾರು ೨೭ ಲಕ್ಷ ಬಿ.ಎಂ.ಟಿ.ಸಿ ಕಡೆಯಿಂದ (ಚಾಲಕರ ಸಂಬಳದಲ್ಲಿ) ನಮ್ಮ ಇಲಾಖೆ ದಂಡ ವಸೂಲಿ ಮಾಡಿದೆ.

ಸಂಚಾರಿ ಪೊಲೀಸ್ರಿಗೆ ಸರ್ಕಾರ ದಂಡ ವಸೂಲಿ ಮಾಡುವ ಬಗ್ಗೆ ನಿಗದಿಪಡಿಸಿದೆಯೇ?
ಉ: ಯಾವುದೇ ಸಂಚಾರಿ ಪೊಲೀಸ್ ಅಧಿಕಾರಿಗಳಿಗೆ ಸರ್ಕಾರವಾಗಲೀ ಹಿರಿಯ ಅಧಿಕಾರಿಗಳಾಗಲೀ ಇಷ್ಟೇ ದಂಡ ವಿಧಿಸಬೇಕೆಂದು ನಿಗದಿಪಡಿಸಿಲ್ಲ. ಖಂಡಿಶನ್ ಆಗಿ ಸ್ಟ್ರಿಕ್ಟ್ ಆಗಿ ಎನ್ಫೋರ್ಸ್ಮೆಂಟ್ ಮಾಡಿದಾಗ ವೈಲೇಷನ್ ಕಡಿಮೆ ಆಗುತ್ತದೆ. ಅಪಘಾತಗಳನ್ನು ಕಡಿಮೆ ಮಾಡಿ ಸಂಚಾರ ಸುಗಮವಾಗುವಂತೆ ನೋಡಿಕೊಳ್ಳಬಹುದು. ೨೦೦೯ ರಲ್ಲಿ ಸ್ಟ್ರಿಕ್ಟ್ ಎನ್ಫೋರ್ಸ್ಮೆಂಟ್ ಮಾಡಿದ್ದರಿಂದ ಸುಮಾರು ೩೫ ಕೋಟಿ ದಂಡ ವಿಧಿಸಲಾಗಿದೆ.
ವಾಹನ ಸವಾರ ಸಿಗ್ನಲ್ ಜಂಪ್ ಮಾಡಿದಾಗ ಪೊಲೀಸ್ ನವರು ಹಿಡಿಯುತ್ತಾರೆ, ಆದರೆ ಜಂಕ್ಷನ್ನಲ್ಲಿಯೇ ಪೊಲೀಸ್ ಮೆನ್ ಇದ್ದರೆ ಯಾರೂ ಸಿಗ್ನಲ್ ಜಂಪ್ ಮಾಡುವುದಿಲ್ಲ, ಏಕೆ ನಿಲ್ಲುವುದಿಲ್ಲ? ಉ: ಪ್ರಪಂಚದ ಎಲ್ಲಾ ಕಡೆಯಲ್ಲಿಯೂ ಸಿಗ್ನಲ್ ಇರುವ ಕಡೆ ಯಾವುದೇ ಪೊಲೀಸಿನವರು ಇರುವುದಿಲ್ಲ. ಆದರೆ ನಮ್ಮ ಸಮಾಜದಲ್ಲಿ ಮಾತ್ರ ಪೊಲೀಸಿನವರು ಜಂಕ್ಷನ್ಲ್ಲಿ ಇರುತ್ತಾರೆ. ವಾಹನ ನಡೆಸುವ ಎಲ್ಲರೂ ಸಂಚಾರಿ ನಿಯಮ ಪಾಲನೆ ಮಾಡಿದರೆ ಜಂಕ್ಷನ್ನಲ್ಲಿ ಪೊಲೀಸರ ಅವಶ್ಯಕತೆ ಇರುವುದಿಲ್ಲ. ವಸತಿಗಳು ಇರುವ ಪ್ರದೇಶಗಳಲ್ಲಿ ಸಂಚಾರ ಸುಗಮದ ಬಗ್ಗೆ ಗಮನ ಹರಿಸಬೇಕು.

ರಸ್ತೆಯಲ್ಲಿ ವಾಹನ ಇಲ್ಲದೇ ಖಾಲಿ ರಸ್ತೆ ಇರುವಾಗ ಅತಿವೇಗ ಮಾಡಿದರೆ ಪೊಲೀಸಿನವರು ಏಕೆ ವಾಹನ ನಿಲ್ಲಿಸುತ್ತಾರೆ?
ಉ: ಯಾವುದೇ ವಾಹನ ಸವಾರ/ಚಾಲಕನಾಗಲೀ ರಸ್ತೆಯಲ್ಲಿ ವಾಹನಗಳಿಲ್ಲದೇ ಖಾಲಿ ಇದ್ದರೆ ವಾಹನಗಳನ್ನು ಅತಿವೇಗವಾಗಿ ಚಾಲನೆ ಮಾಡಬಾರದು ಇತರೇ ವಾಹನಗಳು ಸಂಚರಿಸುತ್ತವೆ, ಪಾದಚಾರಿಗಳು ರಸ್ತೆ ದಾಟುತ್ತಿರುತ್ತಾರೆ. ಹೊರ ವರ್ತುಲ ರಸ್ತೆ, ಕೆಲವು ಮುಖ್ಯ ರಸ್ತೆಗಳಲ್ಲಿ ರೆಡಾರ್ಗನ್ ವಾಹನದ ಸಹಾಯದಿಂದ ಅತಿವೇಗ ಚಾಲನೆಗೆ ಕೇಸು ದಾಖಲಿಸಬಹುದು. ರಸ್ತೆಯಲ್ಲಿ ವಾಹನ ನಡೆಸುವ ಚಾಲಕನಿಗೆ ಚಾಲನೆಯ ಬಗ್ಗೆ ಜವಾಬ್ದಾರಿ ಇರಬೇಕು. ಅತಿ ವೇಗವಾಗಿ ಚಾಲನೆ ಮಾಡುವುದರಿಂದ ಇತರ ಚಾಲಕರಿಗೆ ತೊಂದರೆ ಅಗಿ ಅಪಘಾತ ವಾಗುವ ಸಂಭವವಿರುತ್ತದೆ. ರಸ್ತೆಗಳು ವಿನ್ಯಾಸವಾಗಿರುತ್ತವೆ, ಅತಿವೇಗ ಹಾಗೂ ಸುರಕ್ಷತೆಯ ಸಲುವಾಗಿ ರಸ್ತೆ ವಿನ್ಯಾಸ ಮಾಡಿರುತ್ತಾರೆ. ಕೆಲವು ರಸ್ತೆಗಳಲ್ಲಿ ಸ್ವೀಡ್ ಲಿಮಿಟ್ ಬೋರ್ಡ್ಗಳನ್ನು ಅಳವಡಿಸಿರುತ್ತಾರೆ.

ಸಿಗ್ನಲ್ ಅಳವಡಿಸುವ ಉದ್ದೇಶವೇನು?
ಉ: ಜಂಕ್ಷನ್ಗಳಲ್ಲಿ ಸಿಗ್ನಲ್ ಇರುವುದರಿಂದ ವಾಹನ ಚಾಲಕರು ಸಿಗ್ನ್ಲ್ ಪ್ರಕಾರ ನಿಯಮದಂತೆ ಸುಗಮವಾಗಿ ವಾಹನ ಚಲಿಸುತ್ತಾರೆ. ಜಂಕ್ಷನ್ಗಳಲ್ಲಿ ಸಿಗ್ನಲ್ ಇಲ್ಲದಿದ್ದರೆ ವಾಹನ ಚಾಲಕರು ಅಡ್ಡಾದಿಡ್ಡಿಯಾಗಿ ವಾಹನ ನಡೆಸಿ ಟ್ರಾಫಿಕ್ ಜಾಮ್ ಮಾಡಿಕೊಳ್ಳುತ್ತಾರೆ. ಹಾಗೂ ಅಪಘಾತಗಳು ಸಂಭವಿಸುತ್ತವೆ. ಸಿಗ್ನ್ಲ್ ಇರುವ ಜಂಕ್ಷನ್ಗಳಲ್ಲಿ ವಾಹನ ಸಂಚಾರ ಸುಗಮವಾಗಿ ಸರಾಗವಾಗಿ ಚಲಿಸುತ್ತಿರುತ್ತದೆ. ನಗರದಲ್ಲಿ ಸಿಗ್ನ್ಲ್ನ ಅವಶ್ಯಕತೆ ಬಹಳ ಪ್ರಾಮುಖ್ಯತೆ ಪಡೆದಿರುತ್ತದೆ. ಸಿಗ್ನ್ಲ್ ಇರುವುದರಿಂದ ವಾಹನ ಸವಾರ/ಚಾಲಕರು ಶಿಸ್ತಿನಿಂದ ವಾಹನ ನಡೆಸುತ್ತಾರೆ. ಪಾದಚಾರಿಗಳು ಸರಾಗವಾಗಿ ರಸ್ತೆ ದಾಟುತ್ತಿರುತ್ತಾರೆ.

ಪೊಲೀಸಿನವರು ಏಕ ಮುಖ ಸಂಚಾರ ಮಾಡುವ ಉದ್ದೇಶವೇನು?
ಉ: ಏಕಮುಖ ಸಂಚಾರ ಮಾಡುವುದರಿಂದ ವಾಹನಗಳು ಅಡೆತಡೆ ಇಲ್ಲದೆ ನಿಲ್ಲದೇ ಸಂಚರಿಸುತ್ತಲೇ ಇರುತ್ತವೆ. ಮುಖ್ಯವಾಗಿ ಬಲ ತಿರುವು ತೆಗೆದುಕೊಳ್ಳುವವರು ಸರಾಗವಾಗಿ ಹೋಗಬಹುದು ಆದರೆ ದ್ವಿಮುಖ ಸಂಚಾರ ಇದ್ದರೆ ವಾಹನ ಸಂಚಾರ ಮಂದಗತಿಯಲ್ಲಿ ಸಾಗುತ್ತಿರುತ್ತದೆ. ಬಲತಿರುವು ತೆಗೆದುಕೊಳ್ಳುವುದು ಬಹಳ ಕಷ್ಟವಾಗುತ್ತದೆ, ಸಂಚಾರ ಸುಗಮವಾಗಿ ಹೋಗಲು ಆಗುವುದಿಲ್ಲ. ಏಖಮುಖ ಸಂಚಾರದಲ್ಲಿ ಎಡಗಡೆ ಹೋಗುವವರು ನೇರ ಹೋಗುವವರು ಮತ್ತು ಬಲತಿರುವು ಪಡೆಯುವವರು ಸುಲಭವಾಗಿ ಸಂಚಾರ ನಿಲ್ಲದೇ ಹೋಗುತ್ತಿರುತ್ತದೆ. (As a result Traffic Continues to move without Stopping) ಅಪಘಾತಗಳನ್ನು ತಡೆಗಟ್ಟಬಹುದು ಅಥವಾ ಕಡಿಮೆ ಮಾಡಬಹುದು. ಈಗ್ಗೆ ಸುಮಾರು ೨ವರ್ಷದಿಂದೀಚೆಗೆ ಏಕಮುಖ ಸಂಚಾರ ಕಡಿಮೆ ಮಾಡಿದ್ದಾರೆ. ಆದರೆ ಮೆಟ್ರೋ, ಬಿ.ಬಿ.ಎಂ.ಪಿ ಹಾಗೂ ರಸ್ತೆ ಅಗಲೀಕರಣ, ಈ ಕಾಮಗಾರಿಯು ನಡೆಯುತ್ತಿರುವ ಕಾರಣ ಕೆಲವು ರಸ್ತೆಗಳಲ್ಲಿ ಸಂಚಾರದ ವ್ಯವಸ್ಥೆ ಸ್ವಲ್ಪ ವ್ಯತ್ಯಾಸವಾಗಿರುತ್ತದೆ. ೩೬. ಸುಗಮ ಸಂಚಾರದ ಸಲುವಾಗಿ ಸಿಗ್ನಲ್ ಅಳವಡಿಸಿದೆಯೇ? ಉ: ಈಗ ನಗರದಲ್ಲಿ ೪೦,೦೦೦ ಜಂಕ್ಷನ್ ಗಳಿವೆ, ಕೆಲವು ಕಡೆ ಪಾದಚಾರಿಗಳಿಗೆ ಅನುಕೂಲಕ್ಕಾಗಿ ಪೆಲಿಕಾನ್ ಲೈಟ್ ಕೂಡ ಅಳವಡಿಸಿರುತ್ತಾರೆ. ಇದರಿಂದ ಪಾದಚಾರಿಗಳು ಸುರಕ್ಷಿತವಾಗಿ ರಸ್ತೆ ದಾಟಬಹುದು. ಜಂಕ್ಷನ್ ಗಳ ಹತ್ತಿರ ರಸ್ತೆ ವಿಭಜಕಗಳನ್ನು ಹಾಕಲಾಗಿದೆ. ರಸ್ತೆ ದಾಟುವ ಪಾದಚಾರಿಗಳಿಗೆ ಸಿಗ್ನಲ್ಗಳಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ.

ಸಿಗ್ನಲ್ನಲ್ಲಿ ನಿಂತಿರುವ ವಾಹನಗಳು ಒಂದು ಸೈಕಲ್ ಟೈಂ ನಲ್ಲಿ ಕ್ಲಿಯರ್ ಆಗುತ್ತದೆಯೇ?
ಉ: ನಗರದಲ್ಲಿ ಸಿಗ್ನಲ್ ಟೈಮಿಂಗ್ ೨೫೦ ಸೆ. ೨೫೦ ಜಂಕ್ಷನ್ ಗಳಲ್ಲಿದೆ. ಆದರೆ ೨೦೦ ಸೆ. ಇದ್ದರೆ ಒಳ್ಳೆಯದು. ಯಾವುದೇ ಜಂಕ್ಷನ್ಗಳಲ್ಲಿ, ಜಂಕ್ಷನ್ನಲ್ಲಿ ಎಷ್ಟು ಟ್ರಾಫಿಕ್ ನಿಂತಿರುತ್ತದೆ, ಟ್ರಾಫಿಕ್ ಒತ್ತಡ ಎಷ್ಟಿದೆ, ಎಷ್ಟು ಸೈಕಲ್ ಟೈಂ ಕೊಟ್ಟರೆ ಕ್ಲಿಯರ್ ಆಗುತ್ತದೆ, ಎಂಬುದನ್ನು ಸ್ಟಡಿ ಮಾಡಿ ಅವಶ್ಯಕತೆ ಇದ್ದರೆ ೨೫೦ ಸೆ. ಮೇಲಾಧಿಕಾರಿಗಳಿಗೆ ತಿಳಿಸಿ ಟೈಂ ಸರಿಪಡಿಸಬೇಕು. ಜಂಕ್ಷನ್ನಲ್ಲಿ ಮಿನಿಮಮ್ ೧೮೦ ಸೆ. ಇರಬೇಕು, ಆದರೆ ಸಂಚಾರಿ ಒತ್ತಡದ ಮೇಲೆ ಟೈಂಮಿಂಗ್ ಸರಿಪಡಿಸಬೇಕು.

ರಾಂಗ್ ಪಾರ್ಕಿಂಗ್ನಲ್ಲಿ ನಿಲ್ಲಿಸಿರುವ ವಾಹನಕ್ಕೆ ಎರಡು ರಸೀತಿ ಕೊಡಲು ಕಾರಣವೇನು? ಏಕೆ?
ಉ; ಯಾವುದೇ ದ್ವಿಚಕ್ರ ವಾಹನ ರಾಂಗ್ ಪಾqಂಗ್ನಲ್ಲಿ ನಿಲ್ಲಿಸಿದ್ದರೆ, ಅದನ್ನು ಟೋಯಿಂಗ್ ಮಾಡಿ ಅದಕ್ಕೆ ಬ್ಲಾಕ್ಬೆರ್ರಿಯಲ್ಲಿ ೨೦೦ ರೂ ದಂಡ ಹಾಗು ಟೋಯಿಂಗ್ ಬುಕ್ನಲ್ಲಿ ೧೦೦/-ರೂ ದಂಡ ವಿಧಿಸಿ ರಸೀದಿ ನೀಡುತ್ತಾರೆ. ಇದರಲ್ಲಿ ೨೦೦/-ರೂ ಸರ್ಕಾರಕ್ಕೆ ಹಾಗೂ ೧೦೦/-ರೂ ಪ್ರೈವೇಟ್ ಟೈಗರ್ ವಾಹನದ ಮಾಲೀಕರಿಗೆ ಸೇರುತ್ತದೆ. ಕಾರು ಟೋ ಮಾಡಿದಾಗ ದಂಡದ ಹಣ ವ್ಯತ್ಯಾಸವಾಗುತ್ತದೆ. ದಂಡದ ಹಣ ಬ್ಯಾಂಕಿಗೆ ಕಟ್ಟುತ್ತಾರೆ ಮಾನ್ಯ ಡಿ.ಸಿ.ಪಿ ಸಂಚಾರ ರವರ ಕಡೆಯಿಂದ ಮಾಲೀಕರಿಗೆ ಕೊಡುತ್ತಾರೆ.

ಸಂಚಾರ ಪೊಲೀಸರು ಕನ್ನಡದಲ್ಲಿ ಮಾತ್ರ ಮಾತನಾಡುತ್ತಾರೆ, ಆದರೆ ಹಿಂದಿ, ಇಂಗ್ಲೀಷ್ ಏಕೆ ಮಾತನಾಡುವುದಿಲ್ಲ.?
ಉ: ಕನ್ನಡ ನಮ್ಮ ರಾಜ್ಯ ಬಾಷೆಯಾಗಿದೆ, ಯಾವುದೇ ವ್ಯವಹಾರವನ್ನು ಕನ್ನಡದಲ್ಲೇ ನಡೆಸಬೇಕೆಂದು ಸರ್ಕಾರದ ಆದೇಶವಾಗಿದೆ. ಹಿಂದಿನ ದಿನಗಳಲ್ಲಿ ಇಂಗ್ಲೀಷ್ ಮತ್ತು ಹಿಂದಿ ಬಾಷೆಗಳಲ್ಲಿ ಕಡಿಮೆ ಮಾತನಾಡುತ್ತಿದ್ದರು, ಆದರೆ ಇಂದಿನ ದಿನಗಳಲ್ಲಿ ಸಂಚಾರ ವಿಭಾಗದಲ್ಲಿ ಭಾಗಶ: ವಿಧ್ಯಾರ್ಹತೆ ಉಳ್ಳವರು ಹಾಗೂ ಹೆಚ್ಚು ಸೇವೆ ಮಾಡಿರುವವರು ಇರುವುದರಿಂದ ಇಂಗ್ಲೀಷ್ ಮತ್ತು ಹಿಂದಿ ಮಾತನಾಡುತ್ತಾರೆ. ಕನ್ನಡೇತರರಿಗೆ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಮಾತನಾಡಲು ಸೂಚಿಸಲಾಗಿದೆ.

ಸಂಚಾರ ಸಿಬ್ಬಂದಿ, ಸವಾರ/ಚಾಲಕರು ಸಂಚಾರ ನಿಯಮ ಉಲ್ಲಂಘನೆ ಮಾಡಿದಾಗ ವಾಹನ ಚಾಲಕರನ್ನು ಹಿಡಿಯಲು ಪ್ರಯತ್ನ ಮಾಡುತ್ತಾರೆ. ಇದು ಸರಿಯಲ್ಲ?
ಉ: ಯಾವುದೇ ಸವಾರರಾಗಲೀ, ಚಾಲಕರಾಗಲೇ ಸಂಚಾರ ನಿಯಮ ಉಲ್ಲಂಘನೆ ಮಾಡಿದಾಗ ಸಿಬ್ಬಂದಿಯವರು ವಾಹನ ನಿಲ್ಲಿಸಬಾರದು. ಬದಲಾಗಿ ವಾಹನ ನಂಬರ್ ನೋಟ್ ಮಾಡಿ ವೈಲೇಶನ್ ರಿಪೋರ್ಟ್ ಕಳಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಅಧಿಕಾರಿ ಸ್ಥಳದಲ್ಲಿದ್ದಾಗ ತಪ್ಪು ಮಾಡಿದ ವ್ಯಕ್ತಿಯನ್ನು ಮುಂದಿನ ಕ್ರಮಕ್ಕೆ ಹಾಜರುಪಡಿಸಬಹುದು. ಅಧಿಕಾರಿಗಳು ಸೂಚನೆ ನೀಡಿದರೆ ಮಾತ್ರ ವಾಹನ ನಿಲ್ಲಿಸಬೇಕು.

ಸಂಚಾರ ನಿಯಮ ಹಾಗೂ ಯಾವ ತರಹದ ನಿಯಮ ಉಲ್ಲಂಘನೆ ಬಗ್ಗೆ ವಿವರ?
ಉ: ಸಾಮಾನ್ಯವಾಗಿ ಹೆಚ್ಚು ಸಂಚಾರ ಉಲ್ಲಂಘನೆಗಳಲ್ಲಿ ೧೦೦/- ರೂ ದಂಡ ವಿರುತ್ತದೆ. ಅತೀವೇಗ ಚಾಲನೆ ಮಾಡಿದರೆ ೩೦೦/-ರೂ ದಂಡ ಮತ್ತು ಕುಡಿದು ಅಮಲಿನಲ್ಲಿ ವಾಹನ ನಡೆಸಿದರೆ ೨೦೦೦/-(ಕೋರ್ಟ್ ಮುಖಾಂತರ ದಂಡ) ಆಗುತ್ತದೆ. ಎಲ್ಲಾ ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ಅಧಿಕಾರಿಗಳು ಬ್ಲಾಕ್ಬೆರ್ರಿಯಲ್ಲಿಯೇ ದಾಖಲಿಸಲಾಗುತ್ತದೆ. ಹಾಗೂ ದಂಡ ಕಟ್ಟದ ರಸೀದಿ ಸಹ ನೀಡಲಾಗುತ್ತದೆ.

ಬೆಂಗಳೂರು ನಗರ ಸಂಚಾರ ಪೊಲೀಸ್. © 2017 ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ವಿನ್ಯಾಸ ಮತ್ತು ನಿರ್ವಹಣೆ: ಥಿಮ್ಯಾಟಿಕ್ಸ್ ಐಟಿ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್.